ಕರ್ನಾಟಕ

karnataka

ETV Bharat / city

ಬಿಬಿಎಂಪಿ ಕಚೇರಿಗಳ ಮೇಲೆ ಮತ್ತೆ ಎಸಿಬಿ ದಾಳಿ, ದಾಖಲೆಗಳ ಪರಿಶೀಲನೆ - ಬಿಬಿಎಂಪಿ ಮೇಲೆ ಎಸಿಬಿ ಮತ್ತೆ ದಾಳಿ

ಕೆಲ ವಿಭಾಗಗಳಲ್ಲಿ ಭಾರಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಮೇಲಿನ ಎಸಿಬಿ ದಾಳಿ ಮುಂದುವರಿದಿದೆ.

bbmp
ಬಿಬಿಎಂಪಿ

By

Published : Feb 28, 2022, 12:10 PM IST

Updated : Feb 28, 2022, 1:18 PM IST

ಬೆಂಗಳೂರು:ಕೆಲ ವಿಭಾಗಗಳಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಮೇಲಿನ ಎಸಿಬಿ ದಾಳಿ ಮತ್ತೆ ಮುಂದುವರಿದಿದೆ.

ಬಿಬಿಎಂಪಿ ಕೇಂದ್ರ ಕಚೇರಿ ಸೇರಿ 27 ವಿಭಾಗಗಳ ಮೇಲೆ ದಾಳಿ ನಡೆಸಲಾಗಿದೆ. ಮೂವರು ಎಸ್​ಪಿ, ಡಿವೈಎಸ್​ಪಿ, ಇನ್ಸ್​ಪೆಕ್ಟರ್​, ಎಸ್​ಐ ಸೇರಿದಂತೆ 200 ಅಧಿಕಾರಿಗಳು, ಟಿಡಿಆರ್, ಕಂದಾಯ, ನಗರ ಯೋಜನೆ, ಜಾಹೀರಾತು, ಬಿಬಿಎಂಪಿ ಆರೋಗ್ಯ ವಿಭಾಗ ಸೇರಿದಂತೆ ಹಲವು ವಿಭಾಗಗಳಲ್ಲಿ ದಾಖಲೆಗಳನ್ನು ಜಾಲಾಡುತ್ತಿದ್ದಾರೆ.

ಬಿಬಿಎಂಪಿ ಕಚೇರಿಗಳ ಮೇಲೆ ಮತ್ತೆ ಎಸಿಬಿ ದಾಳಿ, ದಾಖಲೆಗಳ ಪರಿಶೀಲನೆ

ಶನಿವಾರ, ಭಾನುವಾರ ರಜೆ ಹಿನ್ನೆಲೆಯಲ್ಲಿ ತನಿಖೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಇಂದು 200 ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ವಿವಿಧ ಕಚೇರಿಗಳಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಎಸ್​ಪಿ ಯತೀಶ್ ಚಂದ್ರ ಆಗಮನ: ಎಸಿಬಿ ಎಸ್​ಪಿ ಯತೀಶ್​ ಚಂದ್ರ ಅವರು ಬಿಬಿಎಂಪಿ ಕಚೇರಿಗೆ ಆಗಮಿಸಿದ್ದು, ಅಧಿಕಾರಿಗಳ ದಾಳಿಯ ನೇತೃತ್ವ ವಹಿಸಿದ್ದಾರೆ. ಡಿಸಿಪಿ ರವಿಶಂಕರ್ ನೇತೃತ್ವದ ತಂಡದಿಂದ ಬಿಬಿಎಂಪಿ ಆರೋಗ್ಯ ವಿಭಾಗ, ಪಾಲಿಕೆ ಹೆರಿಗೆ ಆಸ್ಪತ್ರೆಯ ಮುಖ್ಯಸ್ಥರ ಕೊಠಡಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಬಿಬಿಎಂಪಿ ಮೇಲೆ ಏಕಕಾಲಕ್ಕೆ ಎಸಿಬಿಯ 8 ತಂಡಗಳಿಂದ ರೇಡ್

Last Updated : Feb 28, 2022, 1:18 PM IST

ABOUT THE AUTHOR

...view details