ಕರ್ನಾಟಕ

karnataka

ETV Bharat / city

ಬೆಂಗಳೂರಲ್ಲಿ ಸಬ್​​​​​ ರಿಜಿಸ್ಟ್ರಾರ್​​ ಕಚೇರಿ‌ಗಳ ಮೇಲೆ‌ ಎಸಿಬಿ‌ ದಾಳಿ - ಎಸಿಬಿ‌ ಎಸ್​ಪಿ ಜೀನೆಂದ್ರ ಖಣಗಾವಿ

ನಗರದ ಬ್ಯಾಟರಾಯನಪುರದ ಉಪ ನೋಂದಣಾಧಿಕಾರಿ ಕಚೇರಿ ಮತ್ತು ಚಿಕ್ಕಜಾಲ ಉಪನೋಂದಣಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದೆ‌.

ಸಬ್​ ರಿಜಿಸ್ಟ್ರಾರ್ ಕಚೇರಿ‌ ಮೇಲೆ‌ ಎಸಿಬಿ‌ ದಾಳಿ: ಮುಂದುವರೆದ ತನಿಖೆ

By

Published : Nov 25, 2019, 10:14 PM IST


ಬೆಂಗಳೂರು:ನಗರದ ವಿವಿಧ ಉಪ ನೋಂದಣಾಧಿಕಾರಿಗಳ (ಸಬ್ ​ರಿಜಿಸ್ಟ್ರಾರ್) ಕಚೇರಿಗಳ‌‌ ಮೇಲೆ‌ ಎಸಿಬಿ ದಾಳಿ ನಡೆಸಿದೆ‌.

ಸಬ್​ ರಿಜಿಸ್ಟ್ರಾರ್ ಕಚೇರಿ‌ ಮೇಲೆ‌ ಎಸಿಬಿ‌ ದಾಳಿ: ಮುಂದುವರೆದ ತನಿಖೆ

ಸಬ್ ರಿಜಿಸ್ಟ್ರಾರ್ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಖಾಸಗಿ ಮಧ್ಯವರ್ತಿಗಳೊಂದಿಗೆ ಶಾಮೀಲಾಗಿ ಕಾನೂನು ಬಾಹಿರವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂಬ ಮಾಹಿತಿ ಎಸಿಬಿ‌ ಎಸ್​ಪಿ ಜೀನೆಂದ್ರ ಖಣಗಾವಿ ಅವರಿಗೆ ಬಂದಿತ್ತು. ಹೀಗಾಗಿ ಇಂದು ಬ್ಯಾಟರಾಯನಪುರದ ಉಪ ನೋಂದಣಾಧಿಕಾರಿ ಕಚೇರಿ, ಚಿಕ್ಕಜಾಲ ಉಪ ನೋಂದಣಾಧಿಕಾರಿ ಕಚೇರಿ ಮೇಲೆ ದಾಳಿ ಮಾಡಿದಾಗ ಅಧಿಕಾರಿಗಳು ಮತ್ತು ಸಿಬ್ಬಂದಿ ಖಾಸಗಿ ಏಜೆಂಟ್​ರ ಮುಖಾಂತರ ಸಾರ್ವಜನಿಕರಿಂದ ಸರ್ಕಾರದ ಕೆಲಸ ಕಾರ್ಯಗಳಿಗೆ ಲಂಚದ ಹಣ ಪಡೆದಿರುವ ವಿಚಾರ ಬಯಲಿಗೆ ಬಂದಿದೆ ಎನ್ನಲಾಗಿದೆ.

ಸದ್ಯ ಮಧ್ಯವರ್ತಿಗಳಾದ ಚೇತನ್​, ಸುಭಾಷ್, ಮಂಜುನಾಥ್, ಲಕ್ಷ್ಮೀನಾರಾಯಣ್​ ಎಂಬುವವರನ್ನ ವಶಕ್ಕೆ ಪಡೆದು, ಕಚೇರಿಯಲ್ಲಿನ ವಿವಿಧ ಬ್ಯಾಂಕಿನ ಚೆಕ್​ಗಳು, ಡಿಡಿ ಮತ್ತು ಸರ್ಕಾರಿ‌ ಸೀಲ್​ಗಳನ್ನ ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ.

ABOUT THE AUTHOR

...view details