ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವನ್ನು ರದ್ದುಗೊಳಿಸುವಂತೆ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯದ ಆಪ್ ಮುಖಂಡ ಭಾಸ್ಕರ್ ರಾವ್ ಟ್ವೀಟ್ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಎಸಿಬಿ ಕಾರ್ಯವೈಖರಿ ಕುರಿತು ಹೈಕೋರ್ಟ್ ನ್ಯಾಯಮೂರ್ತಿಗಳ ಇತ್ತೀಚಿನ ಹೇಳಿಕೆಯನ್ನು ಅನುಮೋದಿಸಿರುವ ಅವರು, ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರ ಅಭಿಪ್ರಾಯ 100% ಸತ್ಯ ಎಂದಿದ್ದಾರೆ.
ಎಸಿಬಿ ರದ್ದುಗೊಳಿಸಿ ಬಲಯುಕ್ತ ಲೋಕಾಯುಕ್ತ ಮುಂದುವರೆಯಲಿ : ಭಾಸ್ಕರ್ ರಾವ್ - Former IPS officer Bhaskar Rao
ಭಾರತದಲ್ಲಿ ಎರಡು ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕ ಮಾತ್ರ. ಆದ್ದರಿಂದ ಎಸಿಬಿಯನ್ನು ಮುಚ್ಚಬೇಕು ಮತ್ತು ಬಲವಾದ ಸ್ವತಂತ್ರ ಲೋಕಾಯುಕ್ತ ಕಾರ್ಯ ನಿರ್ವಹಿಸಬೇಕು ಭಾಸ್ಕರ ರಾವ್ ಟ್ವೀಟ್ ಮಾಡಿದ್ದಾರೆ.

ಆಪ್ ಮುಖಂಡ ಭಾಸ್ಕರ್ ರಾವ್
ಈ ಹಿಂದಿನ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತವನ್ನು ನಿಯಂತ್ರಿಸಲು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿತ್ತು. ಭಾರತದಲ್ಲಿ ಎರಡು ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕ ಮಾತ್ರ. ಆದ್ದರಿಂದ ಎಸಿಬಿಯನ್ನು ಮುಚ್ಚಬೇಕು ಮತ್ತು ಬಲವಾದ ಸ್ವತಂತ್ರ ಲೋಕಾಯುಕ್ತ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಎಸಿಬಿ ಕಾರ್ಯವೈಖರಿಯನ್ನು ಪ್ರಶ್ನಿಸಿರುವ ನ್ಯಾ.ಹೆಚ್.ಪಿ.ಸಂದೇಶ್ ಇತ್ತೀಚಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಭ್ರಷ್ಟಾಚಾರ ಆರೋಪಿತ ಐಎಎಸ್ ಅಧಿಕಾರಿ ಮಂಜುನಾಥ್‌ಗೆ ಮೂಡಿಗೆರೆ ಬಿಜೆಪಿ ಶಾಸಕರ ಬೆಂಬಲ