ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ನ ಕೆಲ ಪಾಲಿಕೆ ಸದಸ್ಯರು, ಪಕ್ಷ ತೊರೆದು ಬಿಜೆಪಿ ಸೇರಿಯಾಗಿದೆ. ಇದೀಗ ಡಿ.30ರಂದು ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ನಡೆಯಲಿದೆ. ಆದರೆ ಈ ಚುನಾವಣೆಯಲ್ಲಿ ಭಾಗಿಯಾಗದಂತೆ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ 14 ಜನ ಕಾಂಗ್ರೆಸ್ ಸದಸ್ಯರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಹಾಗೂ ಅನರ್ಹಗೊಳಿಸುವಂತೆ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಬಿಬಿಎಂಪಿಯ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ಗೆ ಮನವಿ ಸಲ್ಲಿಸಿದ್ದಾರೆ.
ಪಕ್ಷ ತೊರೆದ ಸದಸ್ಯರನ್ನು ಅನರ್ಹಗೊಳಿಸಿ: ಅಬ್ದುಲ್ ವಾಜಿದ್ ಮನವಿ ಪಕ್ಷ ತೊರೆದ ಸದಸ್ಯರನ್ನು ಅನರ್ಹಗೊಳಿಸಿ: ಅಬ್ದುಲ್ ವಾಜಿದ್ ಮನವಿ ಸ್ಥಾಯಿ ಸಮಿತಿಯ ಯಾವುದೇ ಸ್ಥಾನ ನೀಡಬಾರದು ಹಾಗೂ ಇವರ ಅನರ್ಹತೆ ನಿರ್ಧಾರವಾಗುವವರೆಗೆ ಡಿ.30 ಕ್ಕೆ ನಡೆಯಲಿರುವ ಬಿಬಿಎಂಪಿಯ 12 ಸ್ಥಾಯಿ ಸಮಿತಿ ಚುನಾವಣೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗೆದ್ದು, ಉಪಚುನಾವಣೆಯಲ್ಲಿ ಬಿಜೆಪಿ ಪರ ಬಹಿರಂಗವಾಗಿ ಪಾಲಿಕೆ ಸದಸ್ಯರು ಪ್ರಚಾರ ನಡೆಸಿದ್ದಾರೆ. ಹೀಗಾಗಿ ಅನರ್ಹಗೊಳಿಸಬೇಕೆಂದು ಪತ್ರ ನೀಡಿದ್ದಾರೆ.
ಸದಸ್ಯರ ಪಟ್ಟಿ ಹೀಗಿದೆ:
ಎಂ.ಕೆ ಗುಣಶೇಖರ್ (ಜಯಮಹಲ್ ವಾರ್ಡ್)
ನೇತ್ರಾವತಿ ಕೃಷ್ಣೇಗೌಡ (ರಾಮಸ್ವಾಮಿಪಾಳ್ಯ)
ರಾಜಣ್ಣ (ಹೇರೋಹಳ್ಳಿ)
ಆರ್ಯ ಶ್ರೀನಿವಾಸ್ (ಹೆಮ್ಮಿಗೆಪುರ)
ಜಯಪ್ರಕಾಶ್ (ಬಸವನಪುರ)
ಎಚ್.ಜಿ.ನಾಗರಾಜ್ (ವಿಜ್ಞಾನನಗರ)
ವಾಸುದೇವ ಎಸ್(ದೊಡ್ಡಬಿದರಕಲ್ಲು)
ನಿತೀಶ್ ಪುರುಷೋತ್ತಮ ಬಿ.ಎನ್(ಗರುಡಾಚಾರಪಾಳ್ಯ)
ಶ್ರೀಕಾಂತ್ ಎಂ.ಎನ್( ದೇವಸಂದ್ರ)
ಸುರೇಶ್.ವಿ (ಎ.ನಾರಾಯಣಪುರ)
ಶ್ರೀನಿವಾಸಮೂರ್ತಿ (ಜಾಲಹಳ್ಳಿ)
ವೆಂಕಟೇಶ್ ಜಿ.ಕೆ (ಯಶವಂತಪುರ)
ವೇಲುನಾಯ್ಕರ್ ಎಂ (ಲಕ್ಷ್ಮೀದೇವಿನಗರ)
ಮೋಹನ್ಕುಮಾರ್ ಜಿ. (ಕೊಟ್ಟಿಗೆ ಪಾಳ್ಯ)
ಪೌರ ಸಭಾಂಗಣ ಪೂರ್ವಸಿದ್ಧತೆ:
ಬಿಬಿಎಂಪಿ ಸಿಬ್ಬಂದಿಗಳು ಸ್ಥಾಯಿ ಸಮಿತಿ ಚುನಾವಣೆಗೆ ಬೇಕಾದ ಪೌರ ಸಭಾಂಗಣದಲ್ಲಿ ಪೂರ್ವ ತಯಾರಿ ನಡೆಸಿದ್ದಾರೆ. 12 ಸ್ಥಾಯಿ ಸಮಿತಿಗಳ ಸದಸ್ಯರನ್ನು ಚುನಾಯಿಸುವ ಸದಸ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ನಾಳೆ ಪಾಲಿಕೆ ರಜೆ ಇರುವ ಹಿನ್ನಲೆ ಸೋಮವಾರ ನಡೆಯಲಿರುವ ಚುನಾವಣೆಗೆ ಇಂದೇ ನಾಮಫಲಕಗಳನ್ನು ಅಳವಡಿಸಲಾಗಿದೆ.