ನೆಲಮಂಗಲ:ಕೆಲಸ ಕಾಯಂಗೊಳಿಸುವಂತೆ ಒತ್ತಾಯಿಸಿ ಬಹುರಾಷ್ಟ್ರೀಯ ಕಂಪನಿಯಾದ ಎಬಿಬಿ ಕಾರ್ಖಾನೆಯ ಮುಂದೆ ಸುಮಾರು 250ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಕೆಲಸ ಕಾಯಂಗೊಳಿಸುವಂತೆ ಒತ್ತಾಯಿಸಿ ಎಬಿಬಿ ಕಾರ್ಖಾನೆ ಕಾರ್ಮಿಕರ ಪ್ರತಿಭಟನೆ - ನೆಲಮಂಗಲದಲ್ಲಿ ಎಬಿಬಿ ಕಾರ್ಖಾನೆ ಕಾರ್ಮಿಕರ ಪ್ರತಿಭಟನೆ
ಕೆಲಸ ಕಾಯಂಗೊಳಿಸುವಂತೆ ಒತ್ತಾಯಿಸಿ ಬಹುರಾಷ್ಟ್ರೀಯ ಕಂಪನಿಯಾದ ಎಬಿಬಿ ಕಾರ್ಖಾನೆಯ ಮುಂದೆ ಸುಮಾರು 250ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಎಬಿಬಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆ ಕಾರ್ಮಿಕರು ಕೆಲಸವನ್ನು ಕಾಯಂಗೊಳಿಸುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಇದನ್ನು ಮನಗಂಡ ಎಬಿಬಿ ಕಾರ್ಖಾನೆ, ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿತ್ತು. ವರ್ಗಾವಣೆಗೊಂಡ ಗುತ್ತಿಗೆ ಕಾರ್ಮಿಕರು ಹಲವು ದಿನಗಳಿಂದ ಅಮರಣಾಂತ ಉಪವಾಸ ಕೈಗೊಂಡಿದ್ದು, ಇದಕ್ಕೆ ಕ್ಯಾರೆ ಅನ್ನದ ಕಂಪನಿಯ ವಿರುದ್ಧ ಸಿಐಟಿಯು ಸಂಘಟನೆ ಸಹ ಬಂಡವಾಳಶಾಹಿಗಳ ನಡೆ ವಿರೋಧಿಸಿ ಪ್ರತಿಭಟನೆ ನಡೆಸಿತು.
ನೆಲಮಂಗಲ ಸಿಐಟಿಯು ತಾಲೂಕು ಸಮಿತಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಿಐಟಿಯು ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆಗೆ ಬೆಂಬಲ ದೊರೆತಿದ್ದು, ಶೀಘ್ರದಲ್ಲಿ ಎಬಿಬಿ ಕಂಪನಿಯ ಗುತ್ತಿಗೆ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಸಿಐಟಿಯು ರಾಜ್ಯ ಸಮಿತಿ ವತಿಯಿಂದ ಉಗ್ರ ಪ್ರತಿಭಟನೆ ಮಾಡುವ ಮುನ್ನೆಚ್ಚರಿಕೆಯನ್ನು ನೀಡಿದ್ರು.