ಬೆಂಗಳೂರು: ಯುವತಿಯ ವಿಚಾರಕ್ಕೆ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹೆಚ್‌ಎಎಲ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಹೆಚ್‌ಎಎಲ್ ಬಳಿಯ ನಿವಾಸಿ ಲಿಖಿತ್ (21) ಕೊಲೆಯಾದ ಯುವಕ. ನಯೀಮ್ (23) ಕೊಲೆಗೈದ ಆರೋಪಿ.
ನಯೀಮ್ ಮತ್ತು ಲಿಖಿತ್ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಯುವತಿ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಶುಕ್ರವಾರ ಸಂಜೆ 4 ಗಂಟೆಗೆ ಈ ವಿಚಾರದ ಕುರಿತು ಮಾತನಾಡಲು ನಯೀಮ್ನನ್ನು ಹೆಚ್ಎಎಲ್ನ ಲಾಲ್ ಬಹದ್ದೂರ್ ಶಾಸ್ತ್ರಿ ನಗರಕ್ಕೆ ಬರಲು ಲಿಖಿತ್ ಹೇಳಿದ್ದ. ಈ ವೇಳೆ ಯುವತಿ ವಿಚಾರವಾಗಿ ಇಬ್ಬರೂ ಮಾತುಕತೆ ಪ್ರಾರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿತ್ತು.