ಬೆಂಗಳೂರು:ತಮ್ಮ ತಂದೆಗೆ ಬೆಡ್ ಸಿಕ್ಕಿಲ್ಲ ಎಂದು ಮಹಿಳೆಯೊಬ್ಬರು ಸಚಿವ ಆರ್. ಅಶೋಕ್ ಅವರನ್ನು ತಡೆದು ನಿಲ್ಲಿಸಿದ ಘಟನೆ ಬುಧವಾರ ನಡೆದಿದೆ.
ಬಳಿಕ ಸಚಿವ ಆರ್.ಅಶೋಕ್, ಆಯುಕ್ತರಾದ ಗೌರವ ಗುಪ್ತಾ ನೆರವಿನಿಂದ ಮಹಿಳೆಯ ತಂದೆಗೆ ನಗರದ ಸಪ್ತಗಿರಿ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿದೆ.

ಏನಿದು ಘಟನೆ?
ಬೆಡ್ ಕೊಡಿಸುವಂತೆ ಬಿಬಿಎಂಪಿ ವಾರ್ ರೂಮ್ಗೆ ಮಹಿಳೆಯೊಬ್ಬರು ನುಗ್ಗಿ ಬಳಿಕ ಅಲೇ ಇದ್ದ ಸಚಿವ ಆರ್. ಅಶೋಕ್ ಬಳಿ ಅಳಲು ತೋಡಿಕೊಂಡಿದ್ದಳು. ಅಷ್ಟೇ ಅಲ್ಲ ಬೆಡ್ ನೀಡಲ್ಲ ಅಂದರೆ ದಾರಿಯಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದಿದ್ದಳು.
ಇದರಿಂದ ದಿಕ್ಕು ತೋಚದೇ ಕಂಗಾಲಾಗಿದ್ದ ಮಹಿಳೆ, ಸಚಿವರು ನನ್ನ ಸಮಸ್ಯೆ ಪರಿಹರಿಸಿಯೇ ಹೋಗಬೇಕು ಅಂತ ಪಟ್ಟು ಹಿಡಿದಿದ್ದಳು. ಬಳಿಕ ಸಚಿವರು ಸಮಸ್ಯೆ ಅರಿತು ಬೆಡ್ ವ್ಯವಸ್ಥೆ ಮಾಡಿಸಿದ್ದಾರೆ.
ಆ ಬಳಿಕ ಪ್ರತಿಕ್ರಿಯೆ ನೀಡಿದ ಮಹಿಳೆ, ಬೆಡ್ ಕೊಡಿಸಿರುವುದಕ್ಕೆ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ.