ಬೆಂಗಳೂರು: ಸಣ್ಣ ಉದ್ಯಮ, ಬ್ಯೂಟಿ ಪಾರ್ಲರ್ ಹಾಗೂ ಕೆಫೆಗಳಲ್ಲಿ ಕೆಲಸ ಮಾಡಲಿಚ್ಚಿಸುವ ಎಲ್ಜಿಬಿಟಿಕ್ಯೂ ವರ್ಗದ ಜನಕ್ಕೆ ಉದ್ಯೋಗ ಮೇಳವನ್ನು ಇಂದು ಮತ್ತು ನಾಳೆ ಆಯೋಜನೆ ಮಾಡಲಾಗಿದೆ.
ಡಬಲ್ ರೋಡ್ನ ಕೋರ್ಟ್ ಯಾರ್ಡ್ನಲ್ಲಿ ಬೆಳಗ್ಗೆ 10ಕ್ಕೆ ಶುರುವಾದ ಈ ಮೇಳಕ್ಕೆ ಫೋನ್ ಮೂಲಕ ಸಂಪರ್ಕಿಸಿ ಹಲವಾರು ಆಸಕ್ತರು ಮಾಹಿತಿಯನ್ನ ಪಡೆದುಕೊಳ್ಳುತ್ತಿದ್ದಾರೆ ಹಾಗೂ ಜನರು ಬರುತ್ತಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.