ಬೆಂಗಳೂರು: ಭೂಗತ ಪಾತಕಿಯೊಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ಸಾಮಾಜಿಕ ಹೋರಾಟಗಾರ ರವಿ ಶೆಟ್ಟಿ ಬೈಂದೂರು ಎನ್ನುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ಶನಿವಾರ ಮಧ್ಯಾಹ್ನ ಮಂಗಳಮುಖಿಯರ ಪರವಾಗಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ಈ ಸಂದರ್ಭದಲ್ಲಿ, ನಾನು ಅಂಡರ್‌ವರ್ಲ್ಡ್ ಡಾನ್ ಕಲಿ ಯೋಗೇಶ್ ಎಂದು ಹೇಳಿಕೊಂಡ ವ್ಯಕ್ತಿ ಇಂಟರ್‌ನೆಟ್ ಕರೆ ಮೂಲಕ ಮಾತನಾಡಿ ಬೆದರಿಕೆ ಹಾಕಿದ್ದಾನೆ ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಸಂಘಟನೆಯ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೋಳ ಸೊಸೈಟಿ ಪರವಾಗಿ ಬೆದರಿಕೆ ಕರೆ:
ಕರಾವಳಿಯ ಬೋಳ ಸಹಕಾರಿ ವ್ಯವಸಾಯ ಸಂಘದ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತು ಅಕ್ರಮ ಕಲ್ಲು ಕ್ವಾರಿಗಳ ವಿರುದ್ಧ ಹೋರಾಟದ ಸಂಬಂಧ ಈ ಬೆದರಿಕೆ ಕರೆ ಬಂದಿದೆ. ಬೋಳ ಸೊಸೈಟಿ ವಿಷಯಕ್ಕೆ ಹೋದರೆ ಸರಿ ಇರುವುದಿಲ್ಲ. ನಿನ್ನಷ್ಟಕ್ಕೆ ನೀನಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಒಂದು ಗತಿ ಕಾಣಿಸುತ್ತೇನೆ. ನಾನು ಅಂಡರ್‌ವರ್ಲ್ಡ್ ಡಾನ್ ಕಲಿ ಯೋಗೇಶ್. ನಾನು ಯಾರು ಅಂತ ಗೊತ್ತಾಗಬೇಕು ಎಂದರೆ ಗೂಗಲ್‌ನಲ್ಲಿ ಸರ್ಚ್ ಮಾಡು ಎಂದು ಕರೆ ಮಾಡಿರುವ ವ್ಯಕ್ತಿ ಬೆದರಿಸಿರುವುದು ಕೂಡ ವಾಯ್ಸ್ ಕ್ಲಿಪ್‌ನಲ್ಲಿ ಸ್ಪಷ್ಟವಾಗಿದೆ ಎಂದು ರವಿ ಶೆಟ್ಟಿ ಬೈಂದೂರ್ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ಅವ್ಯವಹಾರ: