ಕರ್ನಾಟಕ

karnataka

ETV Bharat / city

ಕಾಲೇಜ್​ನಿಂದ ಡಿಬಾರ್ ಮಾಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ - ಕಾಲೇಜ್​ನಿಂದ ಡಿಬಾರ್ ಮಾಡಿದ್ದಕ್ಕೆ ಆತ್ಮಹತ್ಯೆ

ಕಾಲೇಜ್​ನಿಂದ ಡಿಬಾರ್ ಮಾಡಿದ್ದಾರೆ ಎಂದು ಮನನೊಂದ ಮೊದಲನೇ ವರ್ಷದ ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆ ಜೀವನ್ ಭೀಮಾ ನಗರ ಠಾಣಾ ವ್ಯಾಪ್ತಿಯ ಅಮರಜ್ಯೋತಿ ಲೇಔಟ್​ನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ
ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

By

Published : Mar 5, 2022, 10:35 AM IST

ಬೆಂಗಳೂರು: ಪರೀಕ್ಷೆಯಲ್ಲಿ ಕಾಪಿ ಮಾಡಿದ ಆರೋಪದಡಿ ಕಾಲೇಜಿನಿಂದ ಡಿಬಾರ್ ಆದ ವಿದ್ಯಾರ್ಥಿನಿ ಮನನೊಂದು ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಜೀವನ್ ಭೀಮಾ ನಗರ ಠಾಣಾ ವ್ಯಾಪ್ತಿಯ ಅಮರಜ್ಯೋತಿ ಲೇಔಟಿನಲ್ಲಿ ನಿನ್ನೆ ಸಂಜೆ ನಡೆದಿದೆ.

ಮುಳಬಾಗಿಲು ಮೂಲದ ಭವ್ಯಾ (19) ಮೃತ ವಿದ್ಯಾರ್ಥಿನಿ. ತಾನು ವಾಸವಿದ್ದ ಖಾಸಗಿ ಪಿ.ಜಿ ಕಟ್ಟಡದ 5 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋರಮಂಗಲದ ಜ್ಯೋತಿನಿವಾಸ್ ಕಾಲೇಜಿನಲ್ಲಿ ಮೊದಲನೇ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಭವ್ಯಾ, ಪರೀಕ್ಷೆಯಲ್ಲಿ ಕಾಪಿ ಮಾಡಿದ್ದಾಳೆ ಎಂದು ನಿನ್ನೆಯಷ್ಟೇ ಕಾಲೇಜಿನಿಂದ ಡಿಬಾರ್ ಮಾಡಲಾಗಿತ್ತು.

ಇದನ್ನೂ ಓದಿ:ಉಕ್ರೇನಿಯನ್ ರಾಷ್ಟ್ರೀಯವಾದಿಗಳು 3,700 ಭಾರತೀಯರನ್ನು ಬಲವಂತವಾಗಿ ಹಿಡಿದಿಟ್ಟುಕೊಂಡಿದ್ದಾರೆ: ರಷ್ಯಾ ಆರೋಪ

ಇದರಿಂದಾಗಿ ಮನನೊಂದ ಭವ್ಯಾ ನಿನ್ನೆ ಸಂಜೆ ತನ್ನ ಸಹೋದರಿ ದಿವ್ಯಾಗೆ ಕರೆ ಮಾಡಿ 'ನನ್ನನ್ನ ಕಾಲೇಜ್​ನಿಂದ ಡಿಬಾರ್ ಮಾಡಿದ್ದಾರೆ, ಹೀಗಾಗಿ ಬದುಕೋದಿಲ್ಲ' ಎಂದು ಹೇಳಿದ್ದಾಳೆ. ತಕ್ಷಣ ಈ ವಿಚಾರವನ್ನ ದಿವ್ಯಾ ತಂದೆಗೆ ತಿಳಿಸಿದ್ದಳಾದರೂ ನಂತರ ಪೋಷಕರ ಕರೆಯನ್ನ ಭವ್ಯಾ ಸ್ವೀಕರಿಸಿಲ್ಲ.

ಆತಂಕದಲ್ಲಿ ಪೋಷಕರು ಬೆಂಗಳೂರು ತಲುಪುವಷ್ಟರಲ್ಲೇ ಭವ್ಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನನ್ನ ಮಗಳ ಸಾವಿಗೆ ಕಾಲೇಜು ಆಡಳಿತ ಮಂಡಳಿಯವರೇ ಕಾರಣ ಎಂದು ಆರೋಪಿಸಿರುವ ಭವ್ಯಾ ಪೋಷಕರು, ಜೀವನ್ ಭೀಮಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ABOUT THE AUTHOR

...view details