ಬೆಂಗಳೂರು:ನಗರದ ರಿಚ್ಮಂಡ್ ಟೌನ್ನಲ್ಲಿ ಇಂದು ಹಾಡಹಗಲೇ ದರೋಡೆ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಮಧ್ಯಾಹ್ನ ಯುವಕನೊಬ್ಬ ಚಾಕು ಹಿಡಿದು ಕ್ಯಾಬ್ ಡ್ರೈವರ್ನನ್ನು ದರೋಡೆ ಮಾಡಲು ಯತ್ನಿಸಿದ್ದಾನೆ.
ಹಾಡಹಗಲೇ ಚಾಕು ತೋರಿಸಿ ದರೋಡೆಗೆ ಯತ್ನ ರಸ್ತೆ ಬದಿ ನಿಲ್ಲಿಸಿದ್ದ ಕ್ಯಾಬ್ಗೆ ನುಗ್ಗಿ ಚಾಕು ತೋರಿಸಿ ಡ್ರೈವರ್ ಅನ್ನು ದರೋಡೆ ಮಾಡಲು ಮುಂದಾಗಿದ್ದಾನೆ. ತಕ್ಷಣವೇ ಕ್ಯಾಬ್ ಡ್ರೈವರ್ ಕಿರುಚಾಡಿದ್ದಾನೆ. ಆಗ ಆತನಿಗೆ ಚಾಕು ಇರಿಯಲು ದರೋಡೆಕೋರ ಮುಂದಾಗಿದ್ದಾನೆ.
ತಕ್ಷಣವೇ ಕಳ್ಳನನ್ನು ಹಿಡಿಯಲು ಸಾರ್ವಜನಿಕರು ಹಿಡಿದು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆದರೆ ಆತ ಸ್ಥಳೀಯರಿಗೂ ಚಾಕು ತೋರಿಸಿ ಬೆದರಿಸಿ ಎಸ್ಕೇಪ್ ಆಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ಘಟನೆ ತಿಳಿದು ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ:ನೆಹರು ಮತ್ತು ಗಾಂಧಿ ಕುಟುಂಬದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ನಟಿ ಪಾಯಲ್ ವಿರುದ್ಧ ದೂರು