ಕರ್ನಾಟಕ

karnataka

ETV Bharat / city

ಕೈಯಲ್ಲಿ ಸ್ಮಾರ್ಟ್​​ಫೋನ್​, ಮನೆಯಲ್ಲಿ ಟಿವಿ ಇಲ್ಲ ; ವಲಸೆ ಕಾರ್ಮಿಕರ ಮಕ್ಕಳ ಭವಿಷ್ಯ ಅತಂತ್ರ!!

ಬಡವರು ಮೊಬೈಲ್​ ​ಖರೀದಿಸಲು ಸಾಧ್ಯವಿಲ್ಲದ ಕಾರಣ ಗ್ರಾಮೀಣ ಮಕ್ಕಳು ತರಗತಿಗಳಿಂದ ದೂರವಿದ್ದರೆ, ಇನ್ನೂ ಕೆಲವರಿಗೆ ನೆಟ್​​ವರ್ಕ್​ ಸಮಸ್ಯೆ. ಕೆಲವರ ಮನೆಗಳಲ್ಲಿ ಟಿವಿಗಳೇ ಇಲ್ಲ. ಹೀಗಾಗಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ವಲಸೆ ಕಾರ್ಮಿಕರ ಮಕ್ಕಳು ಈ ವ್ಯವಸ್ಥೆಯಿಂದ ವಂಚಿತರಾಗ್ತಿದ್ದಾರೆ..

online education
ಆನ್​ಲೈನ್​ ಶಿಕ್ಷಣ ವ್ಯವಸ್ಥೆ

By

Published : Sep 28, 2020, 6:28 PM IST

ಬೆಂಗಳೂರು:ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ವಿರುದ್ಧ ಇಡೀ ಪ್ರಪಂಚವೇ ಹೋರಾಡುತ್ತಿದೆ. ಜನಜೀವನ ಅಸ್ತವ್ಯಸ್ತವಾಗಿರುವುದು ಗೊತ್ತೇ ಇದೆ. ಎಲ್ಲಾ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಶಿಕ್ಷಣ ಚಟುವಟಿಕೆ ಪ್ರಾರಂಭಕ್ಕೆ ಇನ್ನೂ ಸಾಧ್ಯವಾಗದ ಕಾರಣ ಮಕ್ಕಳಿಗೆ ಆನ್​​ಲೈನ್​ನಲ್ಲೇ ವಿದ್ಯಾಭ್ಯಾಸ ನೀಡಲಾಗ್ತಿದೆ. ಆದರೆ, ಗ್ರಾಮೀಣ ಭಾಗದ ಮಕ್ಕಳು ಮೊಬೈಲ್​, ಟಿವಿಗಳು ಇಲ್ಲದೆ ನಾನಾ ತೊಂದರೆ ಅನುಭವಿಸುತ್ತಿದ್ದಾರೆ.

ಕೊರೊನಾ ಪ್ರೇರಿತ ಲಾಕ್​ಡೌನ್ ಮಾಡಿದ್ದರೂ ವೈರಸ್ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಇತ್ತ ಅನ್​ಲಾಕ್ 4.0 ಜಾರಿಯಾಗಿದ್ದರೂ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ-ಕಾಲೇಜು ಪ್ರಾರಂಭಕ್ಕೆ ತಡೆ ಹಿಡಿಯಲಾಗಿದೆ. ಹೀಗಾಗಿ, ಶಾಲಾ ವಿದ್ಯಾರ್ಥಿಗಳಿಗೆ ಆನ್​ಲೈನ್ ಮೂಲಕವೇ ಶಿಕ್ಷಣ ಇಲಾಖೆ ಶಿಕ್ಷಣ ನೀಡುತ್ತಿದೆ. ಮಾರ್ಚ್​ ಅಂತ್ಯದಲ್ಲಿ ಮುಚ್ಚಿದ ಶಾಲಾ-ಕಾಲೇಜುಗಳ ಬಾಗಿಲನ್ನು ಈವರೆಗೂ ತೆರೆದಿಲ್ಲ.

ಇನ್ನೇನು ಸೆಪ್ಟೆಂಬರ್​​ನಲ್ಲಿ ‌ಶಾಲೆ ತೆರೆಯಬೇಕು ಎನ್ನುವಷ್ಟರಲ್ಲಿ ದಿಢೀರ್ ಸೋಂಕಿತರ ಸಂಖ್ಯೆ ಏರಿತ್ತು. ಹೀಗಾಗಿ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕು ಉಂಟಾಗಬಾರದೆಂಬ ಕಾರಣಕ್ಕೆ ಖಾಸಗಿ ಶಾಲೆಗಳು ಆನ್​​ಲೈನ್ ಬೋಧನೆಗೆ ಮುಂದಾದವು. ಸರ್ಕಾರಿ ಶಾಲೆಗಳ ಮಕ್ಕಳಿಗೆ ದೂರದರ್ಶನದಲ್ಲಿ ಪಾಠ ನಡೆಯುತ್ತಿದೆ. ಇದೆಲ್ಲದರ ನಡುವೆ ಕೈಯಲ್ಲಿ ಸ್ಮಾರ್ಟ್​​ಫೋನ್​, ಮನೆಯಲ್ಲಿ ಟಿವಿ ಇಲ್ಲದ ವಲಸೆ ಕಾರ್ಮಿಕರ ಮಕ್ಕಳ ಭವಿಷ್ಯ ಅತಂತ್ರವಾಗಿದೆ.

ವಲಸೆ ಕಾರ್ಮಿಕರ ಮಕ್ಕಳ ಭವಿಷ್ಯ ಅತಂತ್ರ

ಬಡವರು ಮೊಬೈಲ್​ ​ಖರೀದಿಸಲು ಸಾಧ್ಯವಿಲ್ಲದ ಕಾರಣ ಗ್ರಾಮೀಣ ಮಕ್ಕಳು ತರಗತಿಗಳಿಂದ ದೂರವಿದ್ದರೆ, ಇನ್ನೂ ಕೆಲವರಿಗೆ ನೆಟ್​​ವರ್ಕ್​ ಸಮಸ್ಯೆ. ಕೆಲವರ ಮನೆಗಳಲ್ಲಿ ಟಿವಿಗಳೇ ಇಲ್ಲ. ಹೀಗಾಗಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ವಲಸೆ ಕಾರ್ಮಿಕರ ಮಕ್ಕಳು ಈ ವ್ಯವಸ್ಥೆಯಿಂದ ವಂಚಿತರಾಗುತ್ತಿದ್ದಾರೆ.

ಅದನ್ನು ಅರಿತ ಸರ್ಕಾರ ಎಲ್ಲಾ ವರ್ಗದ ಮಕ್ಕಳಿಗೂ ಶಿಕ್ಷಣ ಸಿಗಲಿ ಎಂದು ವಿದ್ಯಾಗಮ ಯೋಜನೆ ಜಾರಿ ಮಾಡಿತು. ಶಿಕ್ಷಕರು ಮನೆಮನೆಗೂ ಹೋಗಿ ಮಕ್ಕಳನ್ನು ಒಂದೆಡೆ ಸೇರಿಸಿ ವಿದ್ಯಾಭ್ಯಾಸ ನೀಡುವುದು ಯೋಜನೆಯ ಉದ್ದೇಶ. ಆದರೆ, ಬಡ ಮಕ್ಕಳಿಗೆ ಆ ಯೋಜನೆಯೂ ಸಿಗದಂತಾಗಿದೆ. ಇತ್ತ ಕೆಲ ಶಿಕ್ಷಕರು ಕೊಳಗೇರಿ ಪ್ರದೇಶದ ಮಕ್ಕಳನ್ನು ಒಟ್ಟುಗೂಡಿಸುವಲ್ಲಿ ನಿರ್ಲಕ್ಷ್ಯವಹಿಸಿದ್ರೆ, ಇನ್ನು ಕೆಲ ಶಿಕ್ಷಕರು ಆ ಕಡೆ ಮುಖ ಮಾಡಿಯೇ ಇಲ್ಲ. ಸರಿಯಾದ ರೀತಿ ಪಠ್ಯಪುಸ್ತಕಗಳು ತಲುಪಿಲ್ಲ.

ಪೋಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ ಎನ್ ಯೋಗಾನಂದ

ಸದ್ಯದ ಮಟ್ಟಿಗೆ ಶಾಲೆ ಆರಂಭ ಅನುಮಾನವಾಗಿದೆ. ಈ ನಡುವೆ ಶೈಕ್ಷಣಿಕ ವ್ಯವಸ್ಥೆ ಉಲ್ಟಾಪಲ್ಟಾ ಆಗಿದೆ. ಕೋವಿಡ್ ಕೇಸ್ ಪ್ರತಿನಿತ್ಯ ಏರಿಕೆ ಆಗುತ್ತಿವೆ. ಸರ್ಕಾರ ಈ ನಿಟ್ಟಿನಲ್ಲಿ ಶಾಲೆ ಆರಂಭ ಮಾಡಬೇಕೇ ಬೇಡ್ವೇ ಅನ್ನೋ ಗೊಂದಲದಲ್ಲಿದೆ.

ABOUT THE AUTHOR

...view details