ಬೆಂಗಳೂರು :ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್ಜಿಯುಹೆಚ್ಎಸ್) ನಡೆಸಿದ ಅಂತಿಮ ವರ್ಷದ ಸ್ನಾತಕೋತ್ತರ ಪದವಿ ಕೋರ್ಸ್‌ನ ಪರೀಕ್ಷೆಯಲ್ಲಿ ಒಂದೇ ಪ್ರಶ್ನೆಯನ್ನು ಎರಡು ಬಾರಿ ಕೇಳಿ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಸ್ನಾತಕೋತ್ತರ ಪದವಿಯ ಸಾಮಾನ್ಯ ಶಸ್ತ್ರಚಿಕಿತ್ಸೆ ವಿಷಯದ ಪರೀಕ್ಷೆಯಲ್ಲಿ ಪ್ರಶ್ನೆ ಸಂಖ್ಯೆ 3 ಮತ್ತು 4 ಒಂದೇ ಆಗಿದ್ದವು. ಕೂಡಲೇ ಎಚ್ಚೆತ್ತು ಕೆಲವು ಕೇಂದ್ರಗಳಲ್ಲಿ ಪ್ರಶ್ನೆಗಳನ್ನು ಬದಲಿಸಿದ್ದಾರೆ. ಆದರೆ, ಕೆಲವು ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಎರಡೂ ಪ್ರಶ್ನೆಗೆ ಒಂದೇ ಉತ್ತರ ಬರೆದಿದ್ದಾರೆ ಎನ್ನಲಾಗಿದೆ.
ಪ್ರಶ್ನೆ ಪತ್ರಿಕೆ ತಪ್ಪಾಗಿರುವುದು ಗಮನಕ್ಕೆ ಬಂದ ತಕ್ಷಣ ಪ್ರಶ್ನೆಯನ್ನು ಬದಲು ಮಾಡಿದ್ದೇವೆ. ಅದಕ್ಕೂ ಮೊದಲೇ ಉತ್ತರ ಬರೆದಿರುವ ವಿದ್ಯಾರ್ಥಿಗಳಿಗೆ ಯಾವ ರೀತಿ ಅಂಕ ನೀಡಬೇಕೆಂಬ ಬಗ್ಗೆ ಗೊಂದಲ ಎದುರಾಗಿದೆ. ವಿಷಯ ತಜ್ಞರಿಂದ ಮಾಹಿತಿ ಪಡೆಯುತ್ತೇವೆ ಎಂದು ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ.ರಾಮಕೃಷ್ಣ ರೆಡ್ಡಿ ಹೇಳಿದ್ದಾರೆ.
2 ವಿವಿಗಳಲ್ಲಿ ಒಂದೇ ಪ್ರಶ್ನೆ ಪತ್ರಿಕೆ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸ್ನಾತಕೋತ್ತರ ಪದವಿಯ ಅರಿವಳಿಕೆಶಾಸ್ತ್ರ ವಿಷಯದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನೇ ಆಂಧ್ರಪ್ರದೇಶದ ಡಾ.ಎನ್‌ಟಿಆರ್ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್‌ನಲ್ಲಿಯೂ ನೀಡಲಾಗಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಕುರಿತು ವಿಶ್ವ ವಿದ್ಯಾನಿಲಯಗಳು ಯಾವುದೇ ಸ್ಪಷ್ಟನೆ ನೀಡಿಲ್ಲ.
ಇದನ್ನೂ ಓದಿ:ಶೇ.25 ರಷ್ಟು ಆನ್ಲೈನ್ ಕ್ಲಾಸ್ ಶಾಶ್ವತ ಮುಂದುವರಿಕೆಗೆ ಚಿಂತನೆ: ರಾಜೀವ್ ಗಾಂಧಿ ವಿವಿ ಕುಲಪತಿ