ಬೆಂಗಳೂರು:ಮಂಚದ ಮೇಲೆ ಮಲಗುವ ವಿಚಾರಕ್ಕೆ ಸಹೋದರರ ಮಧ್ಯೆ ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಹೋದ ವ್ಯಕ್ತಿಯೊಬ್ಬ ತಾನೇ ಹಲ್ಲೆಗೊಳಗಾಗಿ ಕೊಲೆಗೀಡಾಗಿರುವ ಘಟನೆ ಜೀವನ್ ಭೀಮಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವೆಂಕಟೇಶ್ (21) ಕೊಲೆಯಾದ ವ್ಯಕ್ತಿ. ನ್ಯೂ ತಿಪ್ಪಸಂದ್ರದ ಹನುಮನಗರದ ನಿವಾಸಿಗಳಾದ ವಿನಯ್ (19), ಆತನ ಸಹೋದರ ಮೋಹನ್ (18) ಬಂಧಿತರು.
ಮಂಚದ ವಿಷ್ಯ.. ಬೆಂಗಳೂರಲ್ಲಿ ಸಹೋದರರ ಮಧ್ಯದ ಜಗಳ ಬಿಡಿಸಲು ಹೋದವನೇ ಹೆಣವಾದ! ಜನವರಿ 28ರಂದು ರಾತ್ರಿ 11 ಗಂಟೆ ವೇಳೆಯಲ್ಲಿ ಮನೆಯಲ್ಲಿರುವ ಮಂಚದ ಮೇಲೆ ಮಲಗುವ ವಿಚಾರಕ್ಕೆ ಸಹೋದರರಾದ ವಿನಯ್ ಮತ್ತು ಮೋಹನ್ ಮಧ್ಯೆ ಜಗಳ ನಡೆಯುತ್ತಿತ್ತು. ಇಬ್ಬರು ಪರಸ್ಪರ ಹೊಡೆದಾಡಿಕೊಳ್ಳುವುದನ್ನು ಕಂಡ ಸಹೋದರ ಸಂಬಂಧಿ ವೆಂಕಟೇಶ್ ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಮುಂದಾಗಿದ್ದಾರೆ.
ಈ ವೇಳೆ ಕೋಪೋದ್ರಿಕ್ತರಾಗಿದ್ದ ಇಬ್ಬರು ಸಹೋದರರು ವೆಂಕಟೇಶ್ ಮೇಲೆಯೇ ದಾಳಿ ಮಾಡಿದ್ದಾರೆ. ಗಾಜಿನ ಚೂರಿನಿಂದ ವೆಂಕಟೇಶ್ ಎದೆಗೆ ಚುಚ್ಚಿದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವವಾಗಿ ವೆಂಕಟೇಶ್ ಮೃತಪಟ್ಟಿದ್ದಾರೆ. ಕೃತ್ಯ ನಡೆದ 12 ಗಂಟೆಯೊಳಗೆ ಆರೋಪಿಗಳನ್ನು ಜೆಬಿ ನಗರ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ