ಕರ್ನಾಟಕ

karnataka

ETV Bharat / city

ಮಕ್ಕಳ‌‌ ಮುಂದೆ ಹೃದಯಾಘಾತದಿಂದ ತಂದೆ ಸಾವು... ಯಶವಂತಪುರ ರೈಲ್ವೆ ಸ್ಟೇಷನ್​ನಲ್ಲಿ ಮನಕಲಕುವ ಘಟನೆ - A man died in yashavanthapura railway station at benglore

ಕುಟುಂಬ ಸಮೇತ ಸ್ವಗ್ರಾಮಕ್ಕೆ ತೆರಳಲು ಆಗಮಿಸಿದ್ದ ವ್ಯಕ್ತಿ ಹೃದಯಾಘಾತದಿಂದ ಯಶವಂತಪುರ ರೈಲು‌ ನಿಲ್ದಾಣದಲ್ಲಿ ಸಾವನ್ನಪ್ಪಿದ್ದಾರೆ. ತಂದೆಯನ್ನು ಕಳೆದುಕೊಂಡ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.

A man died in yashavanthapura railway station at benglore
ರೈಲು‌ ನಿಲ್ದಾಣದಲ್ಲಿ ಸಾವನ್ನಪ್ಪಿದ ವ್ಯಕ್ತಿ

By

Published : Mar 3, 2020, 3:32 AM IST

ಬೆಂಗಳೂರು: ಊರಿಗೆ ಹೋಗಲೆಂದು ಯಶವಂತಪುರ ರೈಲು‌ ನಿಲ್ದಾಣಕ್ಕೆ ಆಗಮಿಸಿದ್ದ ಕುಟುಂಬವೊಂದರ ಯಜಮಾನ ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ರೈಲು‌ ನಿಲ್ದಾಣದಲ್ಲಿ ಸಾವನ್ನಪ್ಪಿದ ವ್ಯಕ್ತಿ

ನಗರದಲ್ಲಿ ಪೈಟಿಂಗ್ ಕೆಲಸ ಮಾಡುತ್ತಿದ್ದ ಮನೋಜ್ ಕುಮಾರ್ ಸಾವನ್ನಪ್ಪಿದ ವ್ಯಕ್ತಿ. ಅಸ್ಸೋಂನ ಗೋರಖ್​​ಪುರದ ಈತ ಬೆಂಗಳೂರಲ್ಲಿ ಹೆಂಡತಿ ಮಕ್ಕಳ‌ ಸಮೇತ ವಾಸವಾಗಿದ್ದ. ಈತನಿಗೆ‌ ಮೂವರು‌ ಮಕ್ಕಳಿದ್ದಾರೆ.‌ ಕುಟುಂಬದ ಜೊತೆ ಗೋರಖ್​ಪುರಕ್ಕೆ ತೆರಳಲು ಇವರು ರಾತ್ರಿ‌ ಯಶವಂತಪುರ ರೈಲು‌ ನಿಲ್ದಾಣಕ್ಕೆ ಆಗಮಿಸಿದ್ದರು. ಪ್ಲಾಟ್​​ಫಾರ್ಮ್​ 6ರಲ್ಲಿ ಬಂದು ರೈಲಿಗಾಗಿ ಕಾಯುತ್ತಿರುವಾಗ ಮನೋಜ್ ಕುಮಾರ್​ಗೆ ಹೃದಯಾಘಾತವಾಗಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.‌ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆ ರವಾನಿಸಲಾಗಿದೆ.

ಕಣ್ಮುಂದೆಯೇ ತಂದೆಯನ್ನ ಕಳೆದುಕೊಂಡು ರೋದಿಸುತ್ತಿದ್ದ ಮಕ್ಕಳನ್ನ ನೋಡಿದ್ರೆ ಕಲ್ಲು ಹೃದಯದವರ ಕಣ್ಣುಗಳು ಕೂಡ ಒದ್ದೆಯಾಗುತ್ತವೆ. ಸ್ಥಳಕ್ಕೆ ಯಶವಂತಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details