ಕರ್ನಾಟಕ

karnataka

ETV Bharat / city

ಐಪಿಎಲ್ ಬೆಟ್ಟಿಂಗ್: ಓರ್ವನ ಬಂಧನ, 82,000 ನಗದು ವಶಕ್ಕೆ - Cricket Betting Latest News

ಐಪಿಎಲ್ ಕ್ರಿಕೆಟ್​ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಓರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 82,000 ನಗದು ಹಾಗೂ ಮೊಬೈಲ್ ಫೋನ್​ ವಶಕ್ಕೆ ಪಡೆಯಲಾಗಿದೆ.

A Man arrested  involved in  IPL cricket betting
ಐಪಿಎಲ್ ಕ್ರಿಕೆಟ್​ ಬೆಟ್ಟಿಂಗ್: ಓರ್ವನ ಬಂಧನ, 82,000 ನಗದು ವಶಕ್ಕೆ

By

Published : Oct 9, 2020, 5:42 PM IST

ಬೆಂಗಳೂರು:ಐಪಿಎಲ್ ಕ್ರಿಕೆಟ್​ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜಶೇಖರ್ ಬಂಧಿತ ಆರೋಪಿ. ಈತ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ನಡೆಯಲಿರುವ ಪಂದ್ಯಾವಳಿಯ ಸೋಲು-ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಮೊಬೈಲ್ ಆ್ಯಪ್ ಮೂಲಕ ಬೆಟ್ಟಿಂಗ್ ರೇಶಿಯೊ ನೋಡಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ.

ಈತನ ವಿರುದ್ಧ ಯಶವಂತಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತನಿಂದ 82,000 ನಗದು ಮತ್ತು ಮೊಬೈಲ್ ಫೋನ್​ ವಶಕ್ಕೆ ಪಡೆಯಲಾಗಿದೆ.

ABOUT THE AUTHOR

...view details