ಕರ್ನಾಟಕ

karnataka

ETV Bharat / city

ಫಸ್ಟ್ ನೈಟ್​ನಲ್ಲೇ ಗಂಡ ಫುಲ್​ ಟೈಟ್: ಮದ್ಯದ ಅಮಲಿನಲ್ಲಿ ಪತ್ನಿಗೆ ಏಟು!

ಮೊದಲ ರಾತ್ರಿಯಲ್ಲೇ ಗಂಡನೋರ್ವ ಎಡವಟ್ಟು ಮಾಡಿಕೊಂಡಿರುವ ಘಟನೆ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ. ಪತ್ನಿಗೆ ಫಸ್ಟ್​ ನೈಟಲ್ಲೇ ಕಿರುಕುಳ ನೀಡಿ, ಹಲ್ಲೆ ಮಾಡಿರುವ ಆರೋಪಿಯನ್ನು ಹೆಚ್ ಎ ಎಲ್ ಠಾಣೆ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

ಬಂಧಿತ ಆರೋಪಿ ಭರತ್
ಬಂಧಿತ ಆರೋಪಿ ಭರತ್

By

Published : Dec 3, 2020, 10:47 AM IST

ಬೆಂಗಳೂರು: ಫಸ್ಟ್ ನೈಟ್​ ದಿನವೇ ಪತಿ ಮದ್ಯ ಸೇವಿಸಿ ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಆರೋಪ ಪ್ರಕರಣ ಹೆಚ್ ಎ ಎಲ್ ಠಾಣಾ ವ್ಯಾಪ್ತಿಯ ಎಲ್​ಬಿಎಸ್ ನಗರದಲ್ಲಿ ಬೆಳಕಿಗೆ ಬಂದಿದೆ.

ಪತ್ನಿಗೆ ಮೊದಲ ರಾತ್ರಿಯಲ್ಲಿ ಕಿರುಕುಳ ನೀಡಿ, ಹಲ್ಲೆ ಮಾಡಿರುವ ಆರೋಪದಡಿ ಭರತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್​ 29 ರಂದು ಗುರು ಹಿರಿಯರು ನಿಶ್ಚಯಿಸಿದಂತೆ ವಿವಾಹ ನಡೆದಿತ್ತು. ವಿವಾಹದ ಬಳಿಕ ಭರತ್, ಫಸ್ಟ್ ನೈಟ್ ವೇಳೆ ಕುಡಿದು ಬಂದಿದ್ದ, ಇದರಿಂದ ಬೇಸತ್ತ ಪತ್ನಿ ಆತನೊಂದಿಗೆ ಇರಲು ನಿರಾಕರಿಸಿದ್ದಾಳೆ ಎನ್ನಲಾಗ್ತಿದೆ.

ಬಂಧಿತ ಆರೋಪಿ ಭರತ್

ಈ ಹಿನ್ನೆಲೆ‌ ಭರತ್ ಹಾಗೂ ಆತನ ಪೋಷಕರು ಯುವತಿಗೆ ಚಿತ್ರಹಿಂಸೆ ನೀಡುವ ಜೊತೆಗೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಹಲ್ಲೆ ಕುರಿತು ಯುವತಿ ಪೋಷಕರಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಿದ ಬಳಿಕ ಭರತ್​​ಗೆ ಈ ಹಿಂದೆಯೇ ಬೇರೆ ಯುವತಿ ಜೊತೆ ವಿವಾಹವಾಗಿತ್ತು ಎಂಬುದು ಬಯಲಾಗಿದೆ. ಮೊದಲೇ ಮದುವೆಯಾಗಿರುವ ವಿಷಯ ಮುಚ್ಚಿಟ್ಟು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಹಲ್ಲೆಗೊಳಗಾದ ಪತ್ನಿ

ಈ ಕುರಿತು ಹೆಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ಭರತ್ ವಿರುದ್ಧ ಪತ್ನಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details