ಕರ್ನಾಟಕ

karnataka

ETV Bharat / city

ನನ್ನ ಸರ್ಕಾರ ಇಂತಹ ಘಟನೆಗಳನ್ನು ಕಬ್ಬಿಣದ ಕೈಯಿಂದ ವ್ಯವಹರಿಸುತ್ತದೆ.. ಸಿಎಂ ಬೊಮ್ಮಾಯಿ ಖಡಕ್​ ಎಚ್ಚರಿಕೆ - CM Basavaraj Bommai news

ಅನ್ಯಕೋಮಿನ ಯುವತಿಗೆ ವ್ಯಕ್ತಿಯೋರ್ವ ಬೈಕ್​ನಲ್ಲಿ ಡ್ರಾಪ್ ನೀಡುತ್ತಿದ್ದ. ಈ ವೇಳೆ ಕೆಲ ದುಷ್ಕರ್ಮಿಗಳು ಆತನನ್ನು ಹಿಂಬಾಲಿಸಿಕೊಂಡು ಬಂದು ಬೈಕ್ ನಿಲ್ಲಿಸಿ ಹಲ್ಲೆ ನಡೆಸಿದ್ದರು. ಯುವತಿಯನ್ನ ಎಲ್ಲಿಗೆ ಕರೆದುಕೊಂಡು ಹೋಗುತ್ತಿರುವೆ? ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಲ್ಲದೆ ವಿಡಿಯೋ ಮಾಡಿದ್ದರು..

ಸಿಎಂ ಬೊಮ್ಮಾಯಿ ಖಡಕ್​ ಎಚ್ಚರಿಕೆ
ಸಿಎಂ ಬೊಮ್ಮಾಯಿ ಖಡಕ್​ ಎಚ್ಚರಿಕೆ

By

Published : Sep 19, 2021, 5:14 PM IST

ಬೆಂಗಳೂರು : ಹೊಸೂರು ರಸ್ತೆ ಡೈರಿ ಸರ್ಕಲ್ ಬಳಿ ಅನ್ಯಕೋಮಿನ ಯುವತಿಗೆ ಬೈಕ್​ನಲ್ಲಿ ಡ್ರಾಪ್​ ಕೊಡುವಾಗ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದ ಸಂಬಂಧ ಇಬ್ಬರನ್ನು ಬಂಧಿಸಲಾಗಿತ್ತು. ಈ ಕುರಿತು ಇಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಸರ್ಕಾರದಲ್ಲಿ ಇಂತಹ ಘಟನೆಗಳಿಗೆ ಅವಕಾಶವಿಲ್ಲ ಎಂದು ಖಡಕ್​ ಆಗಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, "ಅನ್ಯಕೋಮಿನ ಮಹಿಳೆಯೊಂದಿಗೆ ಪ್ರಯಾಣಿಸುತ್ತಿದ್ದ ಬೈಕ್ ಸವಾರನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಲಾಗಿದೆ ಮತ್ತು ಕಾನೂನು ಕ್ರಮ ಆರಂಭಿಸಲಾಗಿದೆ. ನನ್ನ ಸರ್ಕಾರ ಇಂತಹ ಘಟನೆಗಳನ್ನು ಕಬ್ಬಿಣದ ಕೈಯಿಂದ ವ್ಯವಹರಿಸುತ್ತದೆ." ಎಂದು ಹೇಳಿದ್ದಾರೆ.

ಏನಿದು ಘಟನೆ?

ಅನ್ಯಕೋಮಿನ ಯುವತಿಗೆ ವ್ಯಕ್ತಿಯೋರ್ವ ಬೈಕ್​ನಲ್ಲಿ ಡ್ರಾಪ್ ನೀಡುತ್ತಿದ್ದ. ಈ ವೇಳೆ ಕೆಲ ದುಷ್ಕರ್ಮಿಗಳು ಆತನನ್ನು ಹಿಂಬಾಲಿಸಿಕೊಂಡು ಬಂದು ಬೈಕ್ ನಿಲ್ಲಿಸಿ ಹಲ್ಲೆ ನಡೆಸಿದ್ದರು. ಯುವತಿಯನ್ನ ಎಲ್ಲಿಗೆ ಕರೆದುಕೊಂಡು ಹೋಗುತ್ತಿರುವೆ? ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಲ್ಲದೆ ವಿಡಿಯೋ ಮಾಡಿದ್ದರು.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆ ನಡೆದು 12 ಗಂಟೆಯೊಳಗಾಗಿ ಮೈಕೋಲೇಔಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕರಿಬಸವನಗೌಡ ಮಾರ್ಗದರ್ಶನದಲ್ಲಿ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ ಡಿ ಎಸ್ ನಟರಾಜ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಇದೀಗ ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ.

ಓದಿ:ಬೆಂಗಳೂರು: ಮುಸ್ಲಿಂ ಯುವತಿಗೆ ಡ್ರಾಪ್ ನೀಡಿದ ವ್ಯಕ್ತಿಗೆ ಥಳಿಸಿದ ಗುಂಪು..ಅನ್ಯಕೋಮಿನ ಇಬ್ಬರ ಬಂಧನ

For All Latest Updates

TAGGED:

ABOUT THE AUTHOR

...view details