ಬೆಂಗಳೂರು:ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸಿಎಂ ಗೃಹ ಕಚೇರಿ ಕೃಷ್ಣಾದಿಂದ ತೆರಳಿದ ಕೆಲವೇ ನಿಮಿಷಗಳಲ್ಲಿ ಗಾಲ್ಫ್ ಬಾಲ್ವೊಂದು ಬಂದು ಹೈ ಸೆಕ್ಯೂರಿಟಿ ಇರುವ ಕೃಷ್ಣಾ ಕಚೇರಿ ಆವರಣಕ್ಕೆ ಬಿದ್ದಿದೆ.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಮತ್ತೆ ಶುರುವಾಯ್ತು ಗಾಲ್ಫ್ ಬಾಲ್ ಕಾಟ..! - A golf ball that fell to cm home office krishna
ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಿಎಂ ಗೃಹ ಕಚೇರಿ ಕೃಷ್ಣಾದಿಂದ ತೆರಳಿದ ಕೆಲವೇ ನಿಮಿಷಗಳಲ್ಲಿ ಗಾಲ್ಫ್ ಬಾಲ್ ಬಂದು ಹೈ ಸೆಕ್ಯೂರಿಟಿ ಇರುವ ಕೃಷ್ಣಾ ಕಚೇರಿ ಆವರಣಕ್ಕೆ ಬಿದ್ದಿದ್ದು, ಪೊಲೀಸರು ಬಾಲನ್ನು ಪಡೆದು ಪರಿಶೀಲನೆ ನಡೆಸಿದ್ದಾರೆ.
2004ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮೊದಲು ಕುಮಾರ ಕೃಪಾ ರಸ್ತೆಯಲ್ಲಿರುವ ಗಾಲ್ಫ್ ಕ್ಲಬ್ನಿಂದ ಚೆಂಡುಗಳು ಕೃಷ್ಣಾಗೆ ಬಂದು ಬೀಳುವ ಪ್ರಕ್ರಿಯೆ ಪ್ರಾರಂಭವಾಯ್ತು. ನಂತರ ಸಿಎಂ ಅದೇಶದ ಮೇರೆಗೆ ಗಾಲ್ಫ್ ಕೋರ್ಸ್ ಸುತ್ತಲೂ ಎತ್ತರದ ಪರದೆ ಅಳವಡಿಸಲಾಯ್ತು. ನಂತರ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲೂ ಸಿಎಂ ನಿವಾಸ ಕಾವೇರಿ ಹಾಗೂ ಕೃಷ್ಣಾಗೆ ಗಾಲ್ಫ್ ಬಾಲ್ಗಳು ಬಂದು ಬೀಳುವುದು ಮುಂದುವರಿದಿತ್ತು. ಕಳೆದ ಮೈತ್ರಿ ಸರ್ಕಾರದ ಅವಧಿಯಲ್ಲಿ ಕೃಷ್ಣಾ ಆವರಣದಲ್ಲಿ ನಿಂತಿದ್ದ ಡಿಸಿಎಂ ಡಾ.ಜಿ ಪರಮೇಶ್ವರ್ ಬೆಂಗಾವಲು ವಾಹನದ ಗಾಜು ಸಹ ಗಾಲ್ಫ್ ಬಾಲ್ ಬಡಿದು ಜಖಂ ಆಗಿತ್ತು. ಈಗ ಮತ್ತೆ ಅದೇ ಸಮಸ್ಯೆ ಮುಂದುವರಿದಿದೆ.
ಕೃಷ್ಣಾದ ಕಟ್ಟಡಕ್ಕೆ ಬಡಿದ ಬಾಲು ಮುಂಭಾಗದ ಹುಲ್ಲು ಹಾಸಿನ ಮೇಲೆ ಬಂದು ಬಿದ್ದಿದ್ದು, ಪೊಲೀಸರು ಬಾಲನ್ನು ಪಡೆದು ಪರಿಶೀಲನೆ ನಡೆಸಿದ್ದಾರೆ.