ಕರ್ನಾಟಕ

karnataka

ETV Bharat / city

ರಾಜಧಾನಿಯಲ್ಲಿ ಮುಂದುವರಿದ ಕಳ್ಳರ ಅಟ್ಟಹಾಸ.. ಹಣ ಕಿತ್ತುಕೊಂಡು ದುಷ್ಕರ್ಮಿಗಳು ಪರಾರಿ.. - Bangalore crime news

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಕಳ್ಳರ ಹಾವಳಿ ಹೆಚ್ಚಿದೆ. ಬ್ಯಾಂಕ್​​ನಿಂದ ಹೊರಬಂದ ವ್ಯಕ್ತಿಯೊಬ್ಬರಿಗೆ ಚಾಕು ತೋರಿಸಿ ಡ್ರಾ ಮಾಡಿಕೊಂಡ ಹಣವನ್ನು ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ.

a gang of robbers in Bangalore

By

Published : Aug 30, 2019, 11:24 AM IST

Updated : Aug 30, 2019, 11:43 AM IST

ಬೆಂಗಳೂರು:ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳ್ಳರ ಹಾವಳಿ ನಿಲ್ಲುತ್ತಿಲ್ಲ. ಬ್ಯಾಂಕ್​​ನಿಂದ ಹೊರಬಂದ ವ್ಯಕ್ತಿಯೊಬ್ಬರಿಗೆ ಚಾಕು ತೋರಿಸಿ ಡ್ರಾ ಮಾಡಿಕೊಂಡ ಹಣವನ್ನು ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ.

ನಗರದ ಪೀಣ್ಯಾದ ಕೋಟಕ್ ಮಹೀಂದ್ರ ಬ್ಯಾಂಕ್​ನಲ್ಲಿ ಹರೀಶ್ ಎಂಬುವರು ₹2 ಲಕ್ಷ ಹಣ ಡ್ರಾ ಮಾಡಿಕೊಂಡು ಹೊರಗೆ ಬಂದರು. ಅಷ್ಟರಲ್ಲಿ 6 ಮಂದಿ ಕಳ್ಳರು ಏಕಾಏಕಿ ಹರೀಶ್ ಮೇಲೆ ದಾಳಿ ನಡೆಸಿ ಚಾಕು ತೋರಿಸಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಹಣ ನೀಡಲು ನಿರಾಕರಿಸಿದ ಹರೀಶ್​ಗೆ ಕಳ್ಳರು ಕೊಲೆ ಬೆದರಿಕೆ ಹಾಕಿದ್ದಾರೆ.

ಕಳ್ಳರ ಅಟ್ಟಹಾಸ ಸಿಸಿ ಕ್ಯಾಮರಾದಲ್ಲಿ ಸೆರೆ

ಆಗ ಕಳ್ಳರು ಬೈಕಿನಲ್ಲಿಟ್ಟಿದ್ದ ಹಣ ತೆಗೆದುಕೊಂಡು ಬೈಕ್​ಗಳಲ್ಲಿ ಪಲಾಯನ ಮಾಡಿದ್ದಾರೆ. ಈ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಹರೀಶ್ ಪ್ರಕರಣ ದಾಖಲಿಸಿದ್ದಾರೆ.

Last Updated : Aug 30, 2019, 11:43 AM IST

ABOUT THE AUTHOR

...view details