ಬೆಂಗಳೂರು:ಪ್ರೀತಿಸುವಂತೆ ಕಾಲೇಜು ಯುವತಿಗೆ ಹಿಂಸೆ ಕೊಡುತ್ತಾ, ಸಿನಿಮಾ ದೃಶ್ಯದಂತೆ ಐ ಲವ್ ಯೂ, ಯು ಮಸ್ಟ್ ಲವ್ ಮಿ ಎಂದು ಹೇಳಿ ಹಿಂಸೆ ನೀಡುತ್ತಿದ್ದ ಪಾಗಲ್ ಪ್ರೇಮಿವೋರ್ವನನ್ನು ಚಂದ್ರಲೇಔಟ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ನಾಗರಭಾವಿ ನಿವಾಸಿಯಾಗಿರುವ 22 ವರ್ಷದ ಯುವತಿಗೆ ರಾಜೇಶ್ ಎಂಬಾತ ಹಿಂಸೆ ನೀಡುತ್ತಿದ್ದ. ಪ್ರತಿನಿತ್ಯ ಯುವತಿಯನ್ನು ಫಾಲೋ ಮಾಡುತ್ತಿದ್ದ ರಾಜೇಶ್, ಯುವತಿಯ ಸ್ನೇಹಿತರಿಗೆ ಅವಳು ನನ್ನ ಹುಡುಗಿ ಮಾತಾಡಿಸಿದ್ರೆ ಅಷ್ಟೇ ಎಂದು ವಾರ್ನ್ ಮಾಡಿದ್ದ. ಆಕೆಯ ಪೊಷಕರಿಗೂ ಕರೆ ಮಾಡಿ, ನಿಮ್ಮ ಮಗಳನ್ನ ಲವ್ ಮಾಡುತ್ತಿದ್ದೇನೆ, ನಾನೇ ಮದುವೆ ಆಗುತ್ತೇನೆ ಎಂದಿದ್ದನಂತೆ. ಯುವತಿ ಒಪ್ಪದಿದ್ದಾಗ ಬ್ಲೇಡ್ನಲ್ಲಿ ಕೈ ಹಾಗೂ ಕುತ್ತಿಗೆ ಕುಯ್ದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದ.