ಕರ್ನಾಟಕ

karnataka

ETV Bharat / city

ಕುವೈತ್​ನಲ್ಲಿ ಸಿಲುಕಿರುವ ಕನ್ನಡಿಗರನ್ನು ಶೀಘ್ರ ಕರೆತರಲಾಗುವುದು: ಖಂಡ್ರೆ - Bangalore City News

ಕುವೈತ್​​ನಲ್ಲಿ ಸಿಲುಕಿಕೊಂಡಿರುವ 196 ಜನರ ಪೈಕಿ 98 ಮಂದಿ ಕನ್ನಡಿಗರನ್ನು ಶೀಘ್ರದಲ್ಲೇ ಭಾರತಕ್ಕೆ ಕರೆತರಲಾಗುತ್ತಿದೆ. ಉಳಿದ 98 ಮಂದಿಯನ್ನು ಆದಷ್ಟು ಬೇಗನೆ ಕರೆತರಲಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

Kannadigas
ಕನ್ನಡಿಗರು

By

Published : Aug 18, 2020, 8:17 PM IST

ಬೆಂಗಳೂರು:ಕುವೈತ್​​ನಲ್ಲಿ ಅತಂತ್ರರಾಗಿರುವ 196 ಮಂದಿಯಲ್ಲಿ 98 ಕನ್ನಡಿಗರು ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ. ಅನಿವಾಸಿ ಭಾರತೀಯ ಸಚಿವಾಲಯದ ಮಾಜಿ ಸಲಹೆಗಾರ್ತಿ ಆರತಿ ಕೃಷ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಅನಿವಾಸಿ ಭಾರತೀಯ ಮೋಹನ್ ದಾಸ್ ಕಾಮತ್, ಶಾಸಕ ರಾಜಶೇಖರ್ ಪಾಟೀಲ್ ಅವರ ಸಹಕಾರ ಮತ್ತು ಪ್ರಯತ್ನದಿಂದ ಕನ್ನಡಿಗರು ಸ್ವದೇಶಕ್ಕೆ ಮರಳುತ್ತಿದ್ದಾರೆ.

ಕುವೈಟ್​​ನ ಮಹೆಬುಲ್ಲ ನಗರದಲ್ಲಿ ಹೈದರಾಬಾದ್​​​ ಮೆಗಾ ಎಂಜಿನಿಯರಿಂಗ್ ಆ್ಯಂಡ್​​ ಇನ್ಸ್​​​ಟ್ರಕ್ಟರ್​ ಕಂಪನಿಯಡಿ ಬೀದರ್​​ನ ಈ ಎಲ್ಲಾ 196 ಕನ್ನಡಿಗರು ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರು ತಿಂಗಳಿಂದ ಸಂಕಷ್ಟ ಎದುರಿಸುತ್ತಿರುವ ಕಾರ್ಮಿಕರ ನೆರವಿಗೆ ಜಿಲ್ಲೆಯ ಭಾಲ್ಕಿ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರು ಆರತಿ ಕೃಷ್ಣ ಅವರನ್ನು ಸಂಪರ್ಕಿಸಿ ಸಹಾಯ ಯಾಚಿಸಿದ್ದರು.

ಕುವೈತ್​​​ನಲ್ಲಿರುವ ಕನ್ನಡಿಗರು

ಇದಕ್ಕೆ ಅವರು ಉತ್ತಮವಾಗಿ ಸ್ಪಂದಿಸಿದ್ದಾರೆ. ಖಂಡ್ರೆ ಪ್ರಯತ್ನ ಫಲ ಕೊಟ್ಟಿದ್ದು, ಕಾರ್ಮಿಕರು ಹಂತ ಹಂತವಾಗಿ ತಾಯ್ನಾಡಿಗೆ ವಾಪಸ್ ಆಗಲಿದ್ದಾರೆ. ಉಳಿದ 98 ಕಾರ್ಮಿಕರನ್ನು ಆದಷ್ಟು ಬೇಗನೆ ಭಾರತಕ್ಕೆ ಕರೆತರುವ ಭರವಸೆ ನೀಡಿದ ಈಶ್ವರ ಖಂಡ್ರೆ, ನಮ್ಮವರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.

ABOUT THE AUTHOR

...view details