ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ 90 ವರ್ಷ ಮೇಲ್ಪಟ್ಟ ವೃದ್ಧರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ಮತದಾನ ಮಾಡಿದ 96 ವರ್ಷದ ವೃದ್ಧರು 96 ವರ್ಷದ ತಿಮ್ಮಪ್ಪ ನಾಗದೇವನಹಳ್ಳಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. 90 ವರ್ಷದ ಪುಟ್ಟಮ್ಮ, ಅಂಚೆಪಾಳ್ಯ ಮತಗಟ್ಟೆಗೆ ಬಂದು ಮತದಾನ ಮಾಡಿದರು. ವೃದ್ಧರ ಉತ್ಸಾಹ ನೋಡಿ ಸ್ಥಳದಲ್ಲಿದ್ದ ಮತದಾರರು ಆಶ್ಚರ್ಯ ಚಕಿತರಾದರು.
ಮತಗಟ್ಟೆಯಲ್ಲಿಲ್ಲ ವ್ಹೀಲ್ ಚೇರ್ ವ್ಯವಸ್ಥೆ:
ಯಶವಂತಪುರ ಉಪಚುನಾವಣೆಯ ಅಂಚೆಪಾಳ್ಯ ಮತಗಟ್ಟೆಯಲ್ಲಿ ವೃದ್ಧರಿಗೆ ಹಾಗೂ ವಿಕಲಚೇತನರಿಗೆ ವ್ಹೀಲ್ ಚೇರ್ ಸೌಲಭ್ಯ ನೀಡದಿರುವುದು ಮತದಾರರ ಆಕ್ರೋಶಕ್ಕೆ ಕಾರಣವಾಯಿತು.
ಕಂಪನಿಗೆ ರಜೆ ಇಲ್ಲದ ಕಾರಣ ಮತಗಟ್ಟೆ ಖಾಲಿ, ಖಾಲಿ:
ಯಶವಂತಪುರ ಕ್ಷೇತ್ರಕ್ಕೆ ಸೇರುವ ವಾಜರಹಳ್ಳಿ ಮತಗಟ್ಟೆಯ ನಾಲ್ಕು ಬೂತ್ಗಳಲ್ಲಿ ಮತದಾರರಿಲ್ಲದೆ ಖಾಲಿ ಕಾಣಿಸುತ್ತಿದೆ. ಕೆಲ ಕಂಪನಿಗಳಲ್ಲಿ ರಜೆ ಕೊಡದ ಹಿನ್ನೆಲೆ ಮತ ಚಲಾಯಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.