ಬೆಂಗಳೂರು:ರಾಜ್ಯದಲ್ಲಿಂದು ಮತ್ತೊಮ್ಮೆ 9 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಯಲ್ಲಿ 9,280 ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 3,79,486 ಕ್ಕೆ ಏರಿಕೆಯಾಗಿದೆ.
ಕೋವಿಡ್ ಅಪ್ಡೇಟ್: ರಾಜ್ಯದಲ್ಲಿ ಇಂದು 9,280 ಸೋಂಕಿತರು ಪತ್ತೆ...116 ಮಂದಿ ಸಾವು - Karnataka coronavirus update
ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ನಲ್ಲಿ 9,280 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 116 ಮಂದಿ ಮೃತಪಟ್ಟಿದ್ದಾರೆ. 6,161 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಶುಕ್ರವಾರ (ಇಂದು) 116 ಮಂದಿ ಕೊರೊನಾಗೆ ಮೃತಪಟ್ಟಿದ್ದು, ಸಾವಿನ ಸಂಖ್ಯೆ 6,170ಕ್ಕೆ ತಲುಪಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಅಸುನೀಗಿದ್ದಾರೆ. 6,161 ಮಂದಿ ಗುಣಮುಖರಾಗಿದ್ದು, ಒಟ್ಟು ದಾಖಲಾದ ಪ್ರಕರಣಗಳ ಪೈಕಿ 2,74,196 ಜನರು ಡಿಸ್ಜಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 99,101 ಸಕ್ರಿಯ ಪ್ರಕರಣಗಳಿದ್ದು, 785 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 5,35,102 ಜನರಿದ್ದರೆ, 4,81,228 ದ್ವಿತೀಯ ಸಂಪರ್ಕಿತರಿದ್ದಾರೆ. 4,73,307 ಮಂದಿ ಹೋಮ್ ಕ್ವಾರಂಟೈನ್ನಲ್ಲಿದ್ದಾರೆ. ಇವತ್ತು 73,192 ಕೊರೊನಾ ಪರೀಕ್ಷೆ ನಡೆದಿದ್ದು, ಈವರೆಗೂ 31,97,110 ಪರೀಕ್ಷೆಗಳು ನಡೆಸಿದಂತಾಗಿದೆ.