ಕರ್ನಾಟಕ

karnataka

ಗ್ಯಾಸ್ ಸಿಲಿಂಡರ್ ಸ್ಫೋಟ: 9 ಜನರಿಗೆ ಗಂಭೀರ ಗಾಯ

By

Published : Oct 6, 2021, 2:40 PM IST

ಹೊಸೂರು ಪಟ್ಟಣದ ರಾಮನಗರದ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿರುವ ಪರಿಣಾಮ 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

gas cylinder blast tragedy
ಗ್ಯಾಸ್ ಸಿಲಿಂಡರ್ ಸ್ಫೋಟ

ಆನೇಕಲ್: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿರುವ ಪರಿಣಾಮ 9 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕರ್ನಾಟಕ ಗಡಿಭಾಗದ ಹೊಸೂರು ಪಟ್ಟಣದ ರಾಮನಗರದ ಮನೆಯೊಂದರಲ್ಲಿ ನಡೆದಿದೆ.

ಭೀಮಸಿಂಗ್, ಅರವಿಂದ್, ರೂಬಿ, ಚಂದ್ರಾದೇವಿ, ಭೀಮ್​ಸಿಂಗ್​​, ಹೃತಿಕ್, ಸಬೀರ್ ಮತ್ತು ಸಾಧಿಕ್ ಸೇರಿ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡವರಲ್ಲಿ ಒಂದೇ ಕುಟುಂಬದ 7 ಜನರಿದ್ದರೆ, ಅಕ್ಕ-ಪಕ್ಕದ ಮನೆಯಲ್ಲಿದ್ದ ಮತ್ತಿಬ್ಬರು ಸಣ್ಣ-ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂದು ಬೆಳಿಗ್ಗೆ ಆಡುಗೆ ಮಾಡಲು ಗ್ಯಾಸ್ ಸ್ಟೌವ್ ಆನ್ ಮಾಡಿದಾಗ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಉತ್ತರ ಪ್ರದೇಶದಿಂದ ಹೊಸೂರಿಗೆ ಬಂದು ಪಾನಿಪೂರಿ ವ್ಯಾಪಾರ ಮಾಡಿಕೊಂಡಿದ್ದ ಕುಟುಂಬ ಇದಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಗಾಂಜಾ ಮಾರಾಟ: ಚಿಕ್ಕೋಡಿಯಲ್ಲಿ ಇಬ್ಬರ ಬಂಧನ

ಸಿಲಿಂಡರ್ ಸ್ಫೋಟಕ್ಕೆ ಇಡೀ ಮನೆಯಲ್ಲಿನ ವಸ್ತುಗಳು ಛಿದ್ರ ಛಿದ್ರವಾಗಿವೆ. ಮನೆಯ ಮೇಲ್ಛಾವಣಿಯ ಶೀಟ್ ಪೀಸ್ ಪೀಸ್ ಆಗಿದೆ. ಮನೆಯಲ್ಲಿನ ಎಲೆಕ್ಟ್ರಿಕ್ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮಗೊಂಡಿವೆ. ಪ್ರಕರಣ ಸಂಬಂಧ ಹೊಸೂರು ಟೌನ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details