ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಇಂದು  8,655 ಜನರಲ್ಲಿ ಸೋಂಕು‌ ದೃಢ: 86 ಮಂದಿ ಬಲಿ - ಕರ್ನಾಟಕ ಕೋವಿಡ್​-19 ಸಂಖ್ಯೆಗಳು

ಕೊರೊನಾ ಅಟ್ಟಹಾಸ ಮುಂದುವರೆದಿದೆ. ರಾಜ್ಯದಲ್ಲಿಂದು 8655 ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೆ 86 ಜನ ಸೋಂಕಿಗೆ ಬಲಿಯಾಗಿದ್ದಾರೆ.

8655-corona-cases-found-in-the-state-today
ಕೊರೊನಾ ವರದಿ

By

Published : Sep 25, 2020, 9:36 PM IST

Updated : Sep 25, 2020, 10:01 PM IST

ಬೆಂಗಳೂರು:ರಾಜ್ಯದಲ್ಲಿ ಇಂದು 8,655 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 5,57,212ಕ್ಕೆ ಏರಿಕೆ ಆಗಿದೆ.

86 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 8,417ಕ್ಕೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯಕಾರಣಕ್ಕೆ ಮೃತರಾಗಿದ್ದಾರೆ. ‌ಆಸ್ಪತ್ರೆಯಿಂದ 5,644 ಸೋಂಕಿತರು ಗುಣಮುಖರಾಗಿದ್ದು 4,50,302 ಡಿಸ್ಜಾರ್ಜ್ ಆಗಿದ್ದಾರೆ.

ಈವರೆಗೆ ರಾಜ್ಯದಲ್ಲಿ 45,18,923 ಜನರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ. 5,57,212 ಪಾಸಿಟಿವ್ ಕೇಸ್ ದೃಢವಾಗಿದ್ದು ಸದ್ಯ 98,474 ಸಕ್ರಿಯ ಸೋಂಕಿತರು ಇದ್ದಾರೆ. ಸುಮಾರು 823 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ 4,75,438 ಜನರು ಕ್ವಾರೆಂಟೈನ್​ನಲ್ಲಿ ಇದ್ದಾರೆ.‌

Last Updated : Sep 25, 2020, 10:01 PM IST

ABOUT THE AUTHOR

...view details