ಬೆಂಗಳೂರು:25 ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ವೈಟ್‌ಫೀಲ್ಡ್, ಒಳನಾಡಿನ ಕಂಟೈನರ್ ಡಿಪೋವನ್ನು ತಲುಪಿದೆ. ಈ ರೈಲು ನಿನ್ನೆ ಬೆಳಗ್ಗೆ 9:10 ಕ್ಕೆ ಗುಜರಾತ್ನ ಜಾಮ್‌ನಗರದಿಂದ ಆಮ್ಲಜನಕವನ್ನ ಲೋಡ್ ಮಾಡಿಕೊಂಡು ಪ್ರಯಾಣ ಬೆಳೆಸಿತ್ತು. ಈ ರೈಲು ನಾಲ್ಕು ಕ್ರಯೋಜೆನಿಕ್ ಕಂಟೇನರ್‌ಗಳಲ್ಲಿ 84.75 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಅನ್ನು ಸಾಗಿಸಿದೆ.
ಬೆಂಗಳೂರಿನ ವೈಟ್ ಫೀಲ್ಡ್ಗೆ ಬಂದ ರೈಲುಗಳನ್ನು ಮಹಿಳಾ ಸಿಬ್ಬಂದಿ ಚಾಲನೆ ಮಾಡಿದ್ದಾರೆ. ಬೆಂಗಳೂರು ವಿಭಾಗದಲ್ಲಿ ಎಲ್ಲ ಮಹಿಳಾ ಸಿಬ್ಬಂದಿಗಳು ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸುವುದನ್ನು ಮಾನ್ಯ ಪ್ರಧಾನ ಮಂತ್ರಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೆಮ್ಮೆಯಿಂದ ಘೋಷಿಸಿ ಅಭಿನಂದಿಸಿದ್ದರು.