ಬೆಂಗಳೂರು :ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಇಂದು ಬರೋಬ್ಬರಿ 54 ಮಂದಿಯಲ್ಲಿ ಸೋಂಕು ದೃಢವಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 848ಕ್ಕೆ ಏರಿಕೆಯಾಗಿದೆ. ಈವರೆಗೂ 31 ಮಂದಿ ಬಲಿಯಾಗಿದ್ದಾರೆ. ಕೊರೊನಾದಿಂದ 422 ಮಂದಿ ಗುಣಮುಖರಾಗಿದ್ದಾರೆ. ಉಳಿದ 394 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದ್ದು 6 ಮಂದಿ ಐಸಿಯುನಲ್ಲಿದ್ದಾರೆ.
ರಾಜ್ಯದಲ್ಲಿ ಲಕ್ಷಣರಹಿತ ಸೋಂಕಿತರೇ ಹೆಚ್ಚು.. ಆರೋಗ್ಯ ಇಲಾಖೆಯಿಂದ ಆತಂಕಕಾರಿ ಮಾಹಿತಿ!! - ಲಕ್ಷಣ ರಹಿತ ಸೋಂಕಿತರು
ರಾಜ್ಯದಲ್ಲಿ ಇಂದು ದಾಖಲೆಯ ಮಟ್ಟದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಇಲ್ಲಿವರೆಗೂ ಪತ್ತೆಯಾದ ಸೋಂಕಿತರಲ್ಲಿ ಶೇಕಡಾ 76ರಷ್ಟು ಮಂದಿ ಸೋಂಕು ಲಕ್ಷಣ ರಹಿತರು ಎಂಬ ಆತಂಕಕಾರಿ ಮಾಹಿತಿಯನ್ನು ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ.
ಕೊರೊನಾ
ಸೋಂಕಿತರ ಜಿಲ್ಲೆಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ರೆ, 2ನೇ ಸ್ಥಾನದಲ್ಲಿದ್ದ ಮೈಸೂರಿನ ಜಾಗವನ್ನು ಬೆಳಗಾವಿ ಆಕ್ರಮಿಸಿದೆ. ಜಿಲ್ಲಾವಾರು ಸೋಂಕಿತರ ಪಟ್ಟಿ ಈ ಕೆಳಕಂಡಂತಿದೆ.
ಈಗ ಸೋಂಕು ಪತ್ತೆಯಾಗಿರುವ ಶೇ.76ರಷ್ಟು ಜನರಲ್ಲಿ ಲಕ್ಷಣಗಳೇ ಕಂಡು ಬಂದಿಲ್ಲ. ಶೇ.24ರಷ್ಟು ಸೋಂಕಿತರಲ್ಲಿ ಮಾತ್ರ ರೋಗ ಲಕ್ಷಣ ಕಾಣಿಸುತ್ತಿದೆ ಎಂದು ಆರೋಗ್ಯ ಇಲಾಖೆ ಆತಂಕಕಾರಿ ಮಾಹಿತಿ ಬಯಲು ಮಾಡಿದೆ.