ಬೆಂಗಳೂರು: ಕೋವಿಡ್ ನಡುವೆ ಆರ್.ಆರ್. ನಗರದ ಉಪ ಚುನಾವಣೆ ನಡೆಯುತ್ತಿದ್ದು, ವಿಶೇಷವಾಗಿ ಕೋವಿಡ್ ಪಾಸಿಟಿವ್ ರೋಗಿಗಳು ಕೂಡ ತಮ್ಮ ಹಕ್ಕು ಚಲಾಯಿಸಲು ಬಿಬಿಎಂಪಿ ಮತಗಟ್ಟೆಗಳಿಗೆ ಬರಲಿದ್ದಾರೆ. ಇದಕ್ಕೆ ಬಿಬಿಎಂಪಿ ಸಕಲ ಸಿದ್ಧತೆ ನಡೆಸಿದ್ದು, ಸಂಜೆ 5ರಿಂದ 6 ಗಂಟೆವರೆಗೆ 7 ಮಂದಿ ಕೋವಿಡ್ ಪಾಸಿಟಿವ್ ರೋಗಿಗಳು ಮತದಾನ ಮಾಡಲಿದ್ದಾರೆ.
ಉಪ ಕದನ: ಆರ್.ಆರ್. ನಗರದಲ್ಲಿ ಮತ ಹಕ್ಕು ಚಲಾಯಿಸಲಿದ್ದಾರೆ 7 ಸೋಂಕಿತರು - ಆರ್ಆರ್ ನಗರದ ಉಪಚುನಾವಣೆ
ಕೊರೊನಾ ನಡುವೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಆರ್.ಆರ್. ನಗರದಲ್ಲಿ ಏಳು ಜನ ಕೋವಿಡ್ ಸೋಂಕಿತರು ಇಂದು ಸಂಜೆ 5 ಗಂಟೆಯಿಂದ 6 ಗಂಟೆಯವರೆಗೆ ಮತದಾನ ಮಾಡಲಿದ್ದಾರೆ.
ಆರ್.ಆರ್. ನಗರದಲ್ಲಿ 1500 ಜನ ಕೋವಿಡ್ ರೋಗಿಗಳಿದ್ದು, ಆ್ಯಕ್ಟೀವ್ ಕೋವಿಡ್ ಆರ್.ಆರ್. ನಗರದ ವಿಳಾಸ ಹೊಂದಿರುವ ನಿವಾಸಿಗಳ ಸಂಖ್ಯೆ 148 ಇದೆ. ಪಾಲಿಕೆಯಿಂದ ಕರೆ ಮಾಡಿದಾಗ 26 ಜನ ವೋಟ್ ಮಾಡಲು ಇಚ್ಛಿಸಿದ್ದರು. ಆದ್ರೆ ಅಂತಿಮವಾಗಿ 7 ಜನ ಸೋಂಕಿತರು ಸಾರ್ವಜನಿಕ ಮಟಗಟ್ಟೆಗಳಲ್ಲಿ ಪ್ರತ್ಯೇಕ ಸಮಯದಲ್ಲಿ ವೋಟ್ ಮಾಡಲಿದ್ದಾರೆ.
ಕೋವಿಡ್ ಪಾಸಿಟಿವ್ ರೋಗಿಗಳ ಮತಗಟ್ಟೆಗಳು: ಯಶವಂತಪುರದ ಆನಂದ ಸೋಷಿಯಲ್ ಎಜುಕೇಶನ್ ಸೊಸೈಟಿ, ಪೀಣ್ಯ ಗವರ್ನಮೆಂಟ್ ಜೂನಿಯರ್ ಕಾಲೇಜು, ಅಂಗನವಾಡಿ ಕೇಂದ್ರ- ಬೂತ್ ನಂ-1, ಮೌಂಟ್ ಸಿನಾರಿಯಾ ಸ್ಕೂಲ್ ಲಗ್ಗೆರೆ, ಬಿ.ಇ.ಟಿ ಸ್ಕೂಲ್ ಆರ್.ಆರ್. ನಗರದ ಮತಗಟ್ಟೆಗಳಲ್ಲಿ ಸಂಜೆ 5-6ರವರೆಗೆ ಆ್ಯಂಬುಲೆನ್ಸ್ ಮೂಲಕ ಪಿಪಿಇ ಕಿಟ್ ಧರಿಸಿ ಬಂದು ಮತ ಹಾಕಲಿದ್ದಾರೆ.