ಕರ್ನಾಟಕ

karnataka

By

Published : Apr 21, 2020, 1:01 PM IST

ETV Bharat / city

ಇಂದು 7 ಕೋವಿಡ್-19 ಪ್ರಕರಣಗಳು ಪತ್ತೆ: ರಾಜ್ಯದಲ್ಲಿ 415 ಕ್ಕೆ ಏರಿದ ಸೋಂಕಿತರ ಸಂಖ್ಯೆ

ಇಂದು ಕರ್ನಾಟಕದಲ್ಲಿ ಮತ್ತೆ 7 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ರಾಜ್ಯದಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 415 ಕ್ಕೆ ಏರಿಕೆಯಾಗಿದೆ.

ಇಂದು 7 ಕೋವಿಡ್-19 ಪ್ರಕರಣಗಳು ಪತ್ತೆ
ಇಂದು 7 ಕೋವಿಡ್-19 ಪ್ರಕರಣಗಳು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂದು 7 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಈವರೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 415ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ 17 ಮಂದಿ ಕೊರೊನಾಗೆ ಸಾವನ್ನಪ್ಪಿದ್ದರೆ, ಒಟ್ಟು 114 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಇಂದು ಕಲಬುರಗಿಯಲ್ಲಿ ಮತ್ತೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಇವರು ತೀವ್ರ ಉಸಿರಾಟದ ತೊಂದರೆಯಿಂದ ಏಪ್ರಿಲ್ 19 ರಂದು ಇವರು ಆಸ್ಪತ್ರೆಗೆ ದಾಖಲಾಗಿದ್ದರು.

ಸೋಂಕಿತರ ಟ್ರಾವೆಲ್ ಹಿಸ್ಟರಿ ಹೀಗಿದೆ:

409 ನೇ ಸಂಖ್ಯೆಯ ಸೋಂಕಿತ 67 ವರ್ಷದ ಮಹಿಳೆ ಬಂಟ್ವಾಳ ನಿವಾಸಿಯಾಗಿದ್ದು, ತೀವ್ರ ಉಸಿರಾಟದ ತೊಂದರೆ ಇತ್ತು. ಅವರಿಗೆ ಚಿಕಿತ್ಸೆ ಮುಂದುವರೆದಿದೆ.

410 ನೇ ಸಂಖ್ಯೆಯ ಸೋಂಕಿತ ವ್ಯಕ್ತಿ ವಿಜಯಪುರದ 18 ವರ್ಷದ ಯುವತಿಯಾಗಿದ್ದು 306 ನೇ ಸಂಖ್ಯೆಯ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದಾರೆ. ವಿಜಯಪುರದಲ್ಲಿ ಚಿಕಿತ್ಸೆ ಮುಂದುವರಿದಿದೆ.

411 ನೇ ಸಂಖ್ಯೆಯ ಸೋಂಕಿತ ವ್ಯಕ್ತಿ ವಿಜಯಪುರದ 30 ವರ್ಷದ ಮಹಿಳೆಯು 306 ನೇ ಸಂಖ್ಯೆಯ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದು, ವಿಜಯಪುರದಲ್ಲಿ ಚಿಕಿತ್ಸೆ ಮುಂದುವರಿದಿದೆ. ‌

412 ನೇ ಸಂಖ್ಯೆಯ ಸೋಂಕಿತ ಕಲಬುರಗಿಯ 29 ವರ್ಷದ ವ್ಯಕ್ತಿ, ಚಿಕಿತ್ಸೆ ನೀಡಲಾಗುತ್ತಿದೆ. ‌

413 ನೇ ಸಂಖ್ಯೆಯ ಸೋಂಕಿತ ವ್ಯಕ್ತಿ ಕಲಬುರಗಿಯ 61 ವರ್ಷದ ವ್ಯಕ್ತಿ, ಕಲಬುರಗಿಯಲ್ಲಿ ಚಿಕಿತ್ಸೆ ಮುಂದುವರಿದಿದೆ. ‌

414 ನೇ ಸಂಖ್ಯೆಯ ಸೋಂಕಿತ ವ್ಯಕ್ತಿ ಕಲಬುರಗಿಯ 80 ವರ್ಷದ ವೃದ್ಧ, ತೀವ್ರ ಉಸಿರಾಟದ ತೊಂದರೆಯಿದ್ದು, ಕಲಬುರಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

415 ನೇ ಸಂಖ್ಯೆಯ ಸೋಂಕಿತ ವಿಜಯಪುರದ 18 ವರ್ಷದ ಯುವತಿಯು 306 ನೇ ಸಂಖ್ಯೆಯ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದು, ವಿಜಯಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‌

ABOUT THE AUTHOR

...view details