ಕರ್ನಾಟಕ

karnataka

ETV Bharat / city

ಆರ್​ಆರ್ ನಗರ ಟಿಕೆಟ್​ಗಾಗಿ ಕಾಂಗ್ರೆಸ್​ನಲ್ಲಿ 7 ಜನ ಆಕಾಂಕ್ಷಿಗಳು: ಡಿ.ಕೆ.ಸುರೇಶ್ - ಕರ್ನಾಟಕ ಉಪಚುನಾವಣೆ 2020

ಮುನಿರತ್ನ ಅವರಿಗೂ ನನಗೂ ರಾಜಕೀಯವಾಗಿ ಯಾವುದೇ ಸಂಬಂಧವಿಲ್ಲ. ಈ ಬಾರಿ ಆರ್ ಆರ್ ನಗರ ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

dk-suresh
ಡಿ.ಕೆ.ಸುರೇಶ್

By

Published : Oct 4, 2020, 2:13 AM IST

ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಸ್ಪರ್ಧಿಸಲು ಏಳು ಜನ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಕಣದಲ್ಲಿ ಸೂಕ್ತ ಅಭ್ಯರ್ಥಿ ಇಳಿಸಲು ಚರ್ಚೆ ನಡೆಸುತ್ತಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ತಿಳಿಸಿದ್ದಾರೆ.

ಡಿ.ಕೆ.ಸುರೇಶ್ ಹೇಳಿಕೆ

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈಗಾಗಲೇ ಪಕ್ಷಕ್ಕೆ ಮರಳಲು ಬಯಸುವವರನ್ನು ಸೇರಿಸಿಕೊಳ್ಳಲು ನಿರ್ಧರಿಸಿದ್ದೇವೆ. ಅದರಲ್ಲಿ ನಾಲ್ವರು ಪ್ರಮುಖ ನಾಯಕರಿದ್ದಾರೆ. ಇನ್ನು ಹನುಮಂತಪ್ಪ ಅವರು ಹಿರಿಯರಾಗಿದ್ದು, ಸಾಕಷ್ಟು ಕೆಲಸ ಮಾಡಿದ್ದಾರೆ. ಪಕ್ಷದಲ್ಲಿ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್ ಹಾಗೂ ರಾಮಲಿಂಗಾರೆಡ್ಡಿ ಅಂತಹ ಹಿರಿಯ ನಾಯಕರಿದ್ದು, ಪಕ್ಷದಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ಅವರು ತೀರ್ಮಾನಿಸಲಿದ್ದಾರೆ ಎಂದರು.

ಮುನಿರತ್ನ ಜೊತೆ ರಾಜಕೀಯ ಸಂಬಂಧ ಇಲ್ಲ: ಮುನಿರತ್ನ ಅವರಿಗೂ ನನಗೂ ರಾಜಕೀಯವಾಗಿ ಯಾವುದೇ ಸಂಬಂಧವಿಲ್ಲ. ಈ ಬಾರಿ ಆರ್ ಆರ್ ನಗರ ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲಲಿದೆ.

ಕಳ್ಳ- ಪೊಲೀಸ್ ಆಟ: ಡ್ರಗ್ಸ್ ಪ್ರಕರಣದಲ್ಲಿ ಮುಖ್ಯವಾದ ವ್ಯಕ್ತಿಯನ್ನು ಇನ್ನೂ ಹಿಡಿದಿಲ್ಲ. ಕೇವಲ ಇಬ್ಬರು ನಟಿಯರನ್ನು ಹಿಡಿದುಕೊಂಡು ಎಳೆದಾಡುತ್ತಿದ್ದಾರೆ. ಸರ್ಕಾರ ಈ ಪ್ರಕರಣದಲ್ಲಿ ಕಳ್ಳ, ಪೊಲೀಸ್ ಆಟ ಆಡುತ್ತಾ ಇದೆ ಎಂದರು.

ABOUT THE AUTHOR

...view details