ಬೆಂಗಳೂರು: ರಾಜ್ಯದಲ್ಲಿ ಇಂದು 58,862 ಜನರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದು 6892 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 5,82,458 ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿಂದು 6892 ಜನರಿಗೆ ಸೋಂಕು ದೃಢ : 59 ಮಂದಿ ಕೋವಿಡ್ ಗೆ ಬಲಿ - ಕೊರೊನಾ ವೈರಸ್
ಕೊರೊನಾ ತನ್ನ ದೈನಿಂದಿನ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೊರಟಿದ್ದು, ರಾಜ್ಯದಲ್ಲಿ ಇಂದು 6892 ಜನರು ಕೊರೊನಾ ಸೋಂಕಿಗೆ ಗುರಿಯಾಗಿದ್ದು, 59 ಮಂದಿ ಬಲಿಯಾಗಿದ್ದಾರೆ.
ಕರ್ನಾಟಕ ಕೊರೊನಾ ವರದಿ
ಇತ್ತ 7509 ಗುಣಮುಖರಾಗಿದ್ದು 4,69,750 ಜನರು ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಈ ಮೂಲಕ ಸಕ್ರಿಯ ಪ್ರಕರಣಗಳು 1,04,048 ಇದ್ದು ಇದರಲ್ಲಿ 822 ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿಗೆ 59 ಸೋಂಕಿತರು ಮೃತಪಟ್ಟಿದ್ದು ಸಾವಿನ ಸಂಖ್ಯೆ 8641ಕ್ಕೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. ಇತ್ತ ಸೋಂಕಿತರ ನೇರ ಸಂಪರ್ಕದಲ್ಲಿ 5,04,720 ದ್ವಿತೀಯ ಹಂತದಲ್ಲಿ 4,59,059 ಮಂದಿ ಸಂಪರ್ಕದಲ್ಲಿ ಇದ್ದಾರೆ. 1,62,104 ಮಂದಿ ಕಳೆದ 7 ದಿನಗಳಲ್ಲಿ ಕ್ವಾರೆಂಟೈನ್ ನಲ್ಲಿ ಇದ್ದಾರೆ.