ಕರ್ನಾಟಕ

karnataka

ETV Bharat / city

ಕುಡಿದ ಮತ್ತಿನಲ್ಲಿ ಪಟಾಕಿ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ ಹಲ್ಲೆ - ಆರೋಪಿಗಳು ಅಂದರ್! - ಬೆಂಗಳೂರು ಲೇಟೆಸ್ಟ್ ನ್ಯೂಸ್

ಪಟಾಕಿ ಅಂಗಡಿ ಮಾಲೀಕನ ಮೇಲೆ ಹಲ್ಲೆ( assault case) ನಡೆಸಿದ್ದ ಆರು ಆರೋಪಿಗಳನ್ನು ಕೆಂಪೇಗೌಡ ನಗರ ಪೊಲೀಸರು (kempegowda police station) ಬಂಧಿಸಿದ್ದಾರೆ.

6 are arrested in assault case of bangalore
ಹಲ್ಲೆ ಪ್ರಕರಣದ ಆರೋಪಿಗಳ ಬಂಧನ

By

Published : Nov 11, 2021, 2:19 PM IST

ಬೆಂಗಳೂರು: ಕುಡಿದ ಮತ್ತಿನಲ್ಲಿ ಅಂಗಡಿಗೆ ನುಗ್ಗಿ ಉಚಿತ ಪಟಾಕಿ(crackers) ಕೊಡುವಂತೆ ಒತ್ತಾಯಿಸಿ ಮಾರಕಾಸ್ತ್ರಗಳಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆ( assault case) ನಡೆಸಿದ್ದ ಆರು ಆರೋಪಿಗಳನ್ನು ಕೆಂಪೇಗೌಡ ನಗರ ಪೊಲೀಸರು (kempegowda police station) ಬಂಧಿಸಿದ್ದಾರೆ.

ಹಲ್ಲೆ ಪ್ರಕರಣದ ಆರೋಪಿಗಳ ಬಂಧನ - ಡಿಸಿಪಿ ಹರೀಶ್​ ಪಾಂಡೆ ಪ್ರಕರಣ

ಪಟಾಕಿ ಅಂಗಡಿ ಮಾಲೀಕ ಮಧು ಎಂಬುವವರು ದೂರು ನೀಡಿದ ಮೇರೆಗೆ ಆರೋಪಿಗಳಾದ ವಿಕ್ರಮ್, ವೀರಮಣಿ, ಅಜಿತ್, ವಿಜಯ್, ಅಪ್ಪು ಎಂಬುವರನ್ನು ಬಂಧಿಸಲಾಗಿದೆ. ಗಲಾಟೆಯಲ್ಲಿ ಸ್ಥಳೀಯರಿಂದ ಪೆಟ್ಟು ತಿಂದ ಮತ್ತೋರ್ವ ಆರೋಪಿ ಗೌತಮ್​​ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಕಿರಿಕ್​:

ದೀಪಾವಳಿ(diwali) ವೇಳೆ ನ. 3ರ ರಾತ್ರಿ ಬಸವನಗುಡಿಯ ಬುಲ್ ಟೆಂಪಲ್ ರೋಡ್​ನ ಉದಯಭಾನು ಮೈದಾನದಲ್ಲಿ ಪಟಾಕಿ ಅಂಗಡಿಗೆ ಕುಡಿದ ಮತ್ತಿನಲ್ಲಿ ಬಂದ 6-7 ಆರೋಪಿಗಳು ದಾಂಧಲೆ ನಡೆಸಿದ್ದರು. ಉಚಿತವಾಗಿ ಪಟಾಕಿ ಕೊಡುವಂತೆ ಧಮ್ಕಿ ಹಾಕಿದ್ದರು. ಆದರೆ, ಪಟಾಕಿ ಕೊಡಲು ಅಂಗಡಿ ಮಾಲೀಕ ನಿರಾಕರಿಸಿದ್ದಾರೆ.

ಹಲ್ಲೆ:ಇದರಿಂದ ಅಸಮಾಧಾನಗೊಂಡ ದುಷ್ಕರ್ಮಿಗಳು ಮಾತಿನ ಚಕಮಕಿಗಿಳಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಲಾಂಗ್​ನಿಂದ ಹೊಡೆಯಲು(assault case of bangalore) ಮುಂದಾಗಿದ್ದಾರೆ. ಪ್ರತಿರೋಧ ವ್ಯಕ್ತಪಡಿಸಿದ್ದು, ಅಂಗಡಿ ಮಾಲೀಕನ ಕೈ ಮೇಲೆ ಹಲ್ಲೆ ನಡೆಸಿದ್ದಾರೆ.

ಆರೋಪಿಯಿಂದಲೂ ದೂರು:

ಗಲಾಟೆ ಹೆಚ್ಚಾಗುತ್ತಿದ್ದಂತೆ ಸ್ಥಳೀಯರು ಆರೋಪಿಗಳನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಈ ವೇಳೆ, ಗೌತಮ್ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಜನರಿಂದ ಹಿಗ್ಗಾಮುಗ್ಗ ಥಳಿಸಿಕೊಂಡು ಇದೀಗ ಗೌತಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಲ್ಲದೇ ಆರೋಪಿ ಗೌತಮ್ ಸಹ ಸ್ಥಳೀಯರ ವಿರುದ್ಧ ಪ್ರತ್ಯೇಕವಾಗಿ ದೂರು ನೀಡಿದ್ದಾನೆ.

ಇದನ್ನೂ ಓದಿ:ಪತ್ನಿಯನ್ನೇ ಕೊಂದ ಪತಿ: ಅಪ್ಪನ ವಿರುದ್ಧ ಸಾಕ್ಷ್ಯ ಹೇಳಿದ 8ರ ಬಾಲಕಿ

ಅಂಗಡಿ ಮಾಲೀಕ ನೀಡಿದ ದೂರಿನ ಮೇರೆಗೆ ಆಸ್ಪತ್ರೆಯಲ್ಲಿರುವ ಗೌತಮ್​ ಸೇರಿ 6 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ABOUT THE AUTHOR

...view details