ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ಐದನೇ ಹಂತದ ಮೂಲಕ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗ್ತಿದೆ. ಈ ಯೋಜನೆಯ ಕಾಮಗಾರಿ ಪ್ರಗತಿ ವೇಗವಾಗಿ ನಡೆಯುತ್ತಿದ್ದು, 2023 ಕ್ಕೆ ಪೂರ್ಣಗೊಳಿಸಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.
ಈ ಯೋಜನೆಯನ್ನು 5,550 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯಡಿ ಈಗಾಗಲೇ ಟಿ.ಕೆ. ಹಳ್ಳಿಯ 775 ದಶ ಲಕ್ಷ ಲೀ. ಸಾಮರ್ಥ್ಯದ ಜಲಶುದ್ಧೀಕರಣ ಘಟಕ, ಟಿ.ಕೆ.ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಗಳಲ್ಲಿ ನಿರ್ಮಿಸಲಾಗುವ ಜಲಸಂಗ್ರಹಾಗಾರ, ಟಿ.ಕೆ ಹಳ್ಳಿಯಿಂದ ನಗರಕ್ಕೆ ನೀರು ಸಾಗಿಸುವ ಮುಖ್ಯ ಕೊಳವೆ ಮಾರ್ಗದ ಕೆಲಸ ನಿಗದಿತ ಸಮಯಕ್ಕಿಂತ ವೇಗವಾಗಿ ಪೂರ್ಣಗೊಂಡಿದೆ.