567 ಪೌರಕಾರ್ಮಿಕರಲ್ಲಿ ಕೊರೊನಾ: ಸಿಸಿಸಿ ಕೇಂದ್ರಕ್ಕೆ ದಾಖಲಾಗಲು ಒತ್ತಾಯಿಸುವಂತಿಲ್ಲ... ಬಿಬಿಎಂಪಿ ಆಯುಕ್ತ - ಪೌರಕಾರ್ಮಿಕರಲ್ಲಿ ಕೊರೊನಾ
ಇನ್ನು ಕೋವಿಡ್ ಪಾಸಿಟಿವ್ ಬಂದು, ಸೋಂಕಿನ ಲಕ್ಷಣಗಳಿರದಿದ್ದರೆ ಮನೆಯಲ್ಲಿಯೇ ಪ್ರತ್ಯೇಕ ವಾಸಕ್ಕೆ ಒಳಗಾಗಬಹುದು. ಆದರೆ ಹೋಂ ಐಸೋಲೇಷನ್ಗೆ ಒಳಗಾಗಲು ಯಾರಿಗೂ ದುಡ್ಡುಕೊಡಬೇಕಾಗಿಲ್ಲ. ಕೆಲವು ಕಡೆ ಲಂಚ ಕೇಳುತ್ತಿರುವ ಆರೋಪ ಕೇಳಿಬಂದಿದ್ದು, ಸಾರ್ವಜನಿಕರಿಗೆ ಹಣ ಕೇಳಿದರೆ ತಕ್ಷಣ ದೂರು ನೀಡಬೇಕೆಂದು ಬಿಬಿಎಂಪಿ ಆಯುಕ್ತರು ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ
ಬೆಂಗಳೂರು: ನಗರದಲ್ಲಿ ಆಗಸ್ಟ್ 10ರ ವರೆಗೆ 567 ಮಂದಿ ಪೌರಕಾರ್ಮಿಕರಲ್ಲಿ ಕೊರೊನಾ ದೃಢಪಟ್ಟಿದೆ. ಈವರೆಗೆ 12512 ಮಂದಿ ಪೌರಕಾರ್ಮಿಕರಿಗೆ ರ್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಲಾಗಿದೆ. ಇದರಲ್ಲಿ 535 ಮಂದಿಗೆ ಹಾಗೂ 3739 ಮಂದಿಗೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿದ್ದು, ಇದರಲ್ಲಿ 32 ಮಂದಿಗೆ ಪಾಸಿಟಿವ್ ಬಂದಿದೆ.