ಕರ್ನಾಟಕ

karnataka

ETV Bharat / city

ಪಿ.ಎಂ 2.5 ವಾಯು ಮಾಲಿನ್ಯ: ದಿಲ್ಲಿಯಲ್ಲಿ 54 ಸಾವಿರ, ಬೆಂಗಳೂರಲ್ಲಿ 12,000 ಜನ ಸಾವು! - ಗ್ರೀನ್​ಫೀಸ್ ಸಂಶೋಧನೆ

ವಾಯು ಮಾಲಿನ್ಯದಿಂದ ಉಂಟಾದ ಸಾವು ಹಾಗೂ ನಷ್ಟದ ಬಗ್ಗೆ ಗ್ರೀನ್ಪಿಸ್ ಸೌತ್ಈಸ್ಟ್ ಏಷ್ಯಾ ನಡೆಸಿದ ಡೇಟಾ ವಿಶ್ಲೇಷಣೆ ಆತಂಕ ಮೂಡಿಸಿದೆ. ವಾಯು ಮಾಲಿನ್ಯದಿಂದ ಕಳೆದ ವರ್ಷದ ಎಷ್ಟು ಜನ ಮೃತಪಟ್ಟಿದ್ದಾರೆ, ಎಷ್ಟು ಕೋಟಿ ನಷ್ಟ ಆಗಿದೆ ಎಂಬುದರ ವರದಿ ಇಲ್ಲಿದೆ.

Bengaluru Air pollution
ವಾಯು ಮಾಲಿನ್ಯ

By

Published : Feb 19, 2021, 2:27 AM IST

Updated : Feb 19, 2021, 2:58 AM IST

ಬೆಂಗಳೂರು:ಪಿ.ಎಂ 2.5 ವಾಯು ಮಾಲಿನ್ಯದಿಂದ ದೆಹಲಿಯಲ್ಲಿ 54 ಸಾವಿರ ಮೃತಪಟ್ಟರೆ, ಎರಡನೇ ಸ್ಥಾನದಲ್ಲಿರುವ ಬೆಂಗಳೂರಲ್ಲಿ 12 ಸಾವಿರ ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧ್ಯಯನವೊಂದು ಮಾಹಿತಿ ನೀಡಿದೆ.

ಲೈವ್ ಕಾಸ್ಟ್ ಡೇಟಾ ವಿಶ್ಲೇಷಣೆ ಮತ್ತು ಐಕ್ಯೂಏರ್ ಸಂಗ್ರಹಿಸಿದ ಲೈವ್ ಏರ್ ಕ್ವಾಲಿಟಿ ಡೇಟಾವನ್ನು ವಿಶ್ಲೇಷಣೆ ನಡೆಸಿದ ಗ್ರೀನ್ಪಿಸ್ ಸೌತ್ಈಸ್ಟ್ ಏಷ್ಯಾ, 2020 ರಲ್ಲಿ ಭಾರತದ ರಾಷ್ಟ್ರ ರಾಜಧಾನಿಯಲ್ಲಿ ಪಿ.ಎಂ 2.5 ವಾಯು ಮಾಲಿನ್ಯವು ಅಂದಾಜು 54,000 ಜನರ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿದೆ.

ಭಾರತದಲ್ಲಿ ವಾಯು ಮಾಲಿನ್ಯ

ಜಾಗತಿಕವಾಗಿ, ಐದು ಅತ್ಯಂತ ಜನನಿಬಿಡದ ನಗರಗಳಲ್ಲಿ ಪಿ.ಎಂ 2.5 ವಾಯು ಮಾಲಿನ್ಯದಿಂದಾಗಿ ಅಂದಾಜು 1,60,000 ಸಾವು ಸಂಭವಿಸಿದೆ. ಲಾಕ್​ಡೌನ್​​ನಿಂದ ತಾತ್ಕಾಲಿಕವಾಗಿ ವಾಯು ಗುಣಮಟ್ಟ ಸುಧಾರಿಸಿದ್ದರೂ, ವರದಿಯಲ್ಲಿನ ಇತ್ತೀಚಿನ ಅಂಕಿ ಅಂಶಗಳಿಂದಾಗಿ ತಕ್ಷಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಮೂಡಿದೆ. ನವೀಕರಿಸಬಹುದಾದ ಇಂಧನದ ಬಳಕೆಯನ್ನು ತ್ವರಿತವಾಗಿ ಹೆಚ್ಚಿಸುವುದು, ಪಳೆಯುಳಿಕೆ ಇಂಧನ ಬಳಕೆಯನ್ನು ಸ್ಥಗಿತಗೊಳಿಸುವುದು ಮತ್ತು ಸುಸ್ಥಿರ ಹಾಗೂ ಸುಲಭ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡುವುದು ಸದ್ಯದ ಅಗತ್ಯವಾಗಿದೆ ಎಂದು ಗ್ರೀನ್ಪೀಸ್ ತನ್ನ ಸಂಶೋದನೆಯಲ್ಲಿ ತಿಳಿಸಿದೆ.

ಕಾಸ್ಟ್ ಎಸ್ಟಿಮೇಟರ್ ಬಗ್ಗೆ ಕೂಡ ಉಲ್ಲೇಖಿಸಿದ್ದು, ಇದು ಆನ್ಲೈನ್ ಪರಿಕರವಾಗಿದ್ದು, ನೈಜ ಸಮಯದಲ್ಲಿ ಆರೋಗ್ಯ ಪರಿಣಾಮ ಮತ್ತು ವಾಯು ಮಾಲಿನ್ಯದಿಂದಾಗಿ ಉಂಟಾಗುವ ಆರ್ಥಿಕ ವೆಚ್ಚವನ್ನು ವಿಶ್ವದ ಪ್ರಮುಖ ನಗರಗಳಲ್ಲಿ ಟ್ರ್ಯಾಕ್ ಮಾಡುತ್ತದೆ ಎಂದು ಹೇಳಿದೆ.

ಭಾರತದಲ್ಲಿ ವಾಯು ಮಾಲಿನ್ಯ

ಯಾವ ನಗರದಲ್ಲಿ ಎಷ್ಟು ಜನ ಸಾವು?:

ಕಾಸ್ಟ್ ಎಸ್ಟಿಮೇಟರ್ನಲ್ಲಿ ಭಾರತದ ಪ್ರಮುಖ ಐದು ನಗರಗಳಲ್ಲಿ ಅಂದಾಜು ವಾಯು ಮಾಲಿನ್ಯ ಸಂಬಂಧ ಆರ್ಥಿಕ ನಷ್ಟ 1,23,65,15,40,000 ರೂ. ಎಂದು ಅಂದಾಜು ಮಾಡಲಾಗಿದ್ದು, ಇತರ ಭಾರತೀಯ ನಗರಗಳಲ್ಲಿ ಈ ಹಾನಿಯು ಇಷ್ಟೇ ಚಿಂತೆಗೀಡು ಮಾಡುವಂತಿದೆ. 2020 ರಲ್ಲಿ ಮುಂಬೈನಲ್ಲಿ ವಾರ್ಷಿಕ 25,000 ಮರಣ ಪ್ರಮಾಣವು ವಾಯು ಮಾಲಿನ್ಯದಿಂದಾಗಿ ಉಂಟಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ದೆಹಲಿಯಲ್ಲಿ ವಾರ್ಷಿಕ ತಲಾ 12000, 11000, 11000 ಮತ್ತು 54000 ಮರಣ ಪ್ರಮಾಣ ಉಂಟಾಗಿದೆ ಎಂದು ವರದಿಯಲ್ಲಿ ಕಂಡುಬಂದಿದೆ.

ಮಾಲಿನ್ಯಗೊಂಡ ವಾಯುನಿಂದಾಗಿ ಕ್ಯಾನ್ಸರ್ ಮತ್ತು ಹೃದಯಾಘಾತದಿಂದ ಸಾವು ಸಂಭವಿಸುತ್ತದೆ ಹಾಗೂ ಅಸ್ತಮಾ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಕೋವಿಡ್ 19 ಗುಣಲಕ್ಷಣಗಳ ತೀವ್ರತೆ ಹೆಚ್ಚಳವಾಗುತ್ತದೆ ಎಂದು ಗ್ರೀನ್ಪೀಸ್ ಇಂಡಿಯಾದ ಕ್ಲೈಮ್ಯಾಟ್ ಕ್ಯಾಂಪೇನರ್ ಅವಿನಾಶ್ ಚಂಚಲ್ ಹೇಳುತ್ತಾರೆ.

'ಕಡಿಮೆ ವೆಚ್ಚದ, ಸಕ್ರಿಯ ಮತ್ತು ಕಾರ್ಬನ್ ನ್ಯೂಟ್ರಲ್ ಸಾರಿಗೆ ಆಯ್ಕೆಯನ್ನು ನಗರಗಳಲ್ಲಿ ಪ್ರೋತ್ಸಾಹಿಸಬೇಕು. ವಾಕಿಂಗ್, ಸೈಕ್ಲಿಂಗ್ ಮತ್ತು ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಬೇಕು. ಶುದ್ಧ ಇಂಧನ ಮತ್ತು ಸ್ವಚ್ಛ ಸಾರಿಗೆ ವ್ಯವಸ್ಥೆಯ ಬಳಕೆ ಹೆಚ್ಚಳದಿಂದ ಸಾರ್ವಜನಿಕ ಆರೋಗ್ಯ ಸುಧಾರಿಸುತ್ತದೆ. ಅಷ್ಟೇ ಅಲ್ಲ, ಇದು ನಮ್ಮ ಆರ್ಥಿಕತೆ ಮತ್ತು ಸಾರ್ವಜನಿಕ ಹಣಕಾಸನ್ನೂ ಸಶಕ್ತಗೊಳಿಸುತ್ತದೆ' ಎಂದು ಚಂಚಲ್ ತಿಳಿಸುತ್ತಾರೆ.

ಭಾರತದಲ್ಲಿ ವಾಯು ಮಾಲಿನ್ಯ

ಕಾಸ್ಟ್ ಎಸ್ಟಿಮೇಟರ್ ಬಹಿರಂಗಗೊಳಿಸಿದ ಸಂಗತಿಗಳ ಬಗ್ಗೆ ಮಾತನಾಡಿರುವ ಐಕ್ಯೂ ಏರ್ ಸಿಇಒ ಫ್ರಾಂಕ್ ಹಮ್ಮೆಸ್, ಉಸಿರಾಟವೇ ಪ್ರಾಣಹಾನಿ ಉಂಟು ಮಾಡಬಾರದು. ಐದು ಅತಿದೊಡ್ಡ ನಗರಗಳಲ್ಲಿ ಕಳಪೆ ವಾಯು ಗುಣಮಟ್ಟದಿಂದಾಗಿ ವಾರ್ಷಿಕ 1,60,000 ಜೀವಗಳು ಬಲಿಯಾಗಿವೆ ಎಂಬ ಅಂಶವೇ ನಮಗೆ ಎಚ್ಚರಿಕೆ ಗಂಟೆಯಾಗಬೇಕು. ವಾಯು ಮಾಲಿನ್ಯದ ಮೂಲ ನಿರ್ಮೂಲಗೊಳಿಸಲು ಮತ್ತು ನಮ್ಮ ನಗರಗಳನ್ನು ಜೀವಿಸಬಹುದಾದ ಮಟ್ಟಕ್ಕೆ ತರಲು ಸರ್ಕಾರಗಳು, ಕಾರ್ಪೊರೇಶನ್​ಗಳು ಮತ್ತು ಜನಸಾಮಾನ್ಯರು ಇನ್ನಷ್ಟು ಶ್ರಮಿಸಬೇಕಿದೆ ಎಂದಿದ್ದಾರೆ.

ಈ ವರದಿಯಲ್ಲಿ ಕಂಡು ಬರುವ ಪ್ರಮುಖಾಂಶಗಳು:

ಪಿ.ಎಂ 2.5 ಎಂಬುದು 2.5 ಮೈಕ್ರೋ ಮೀಟರ್​​ಗಳಿಗಿಂತ ಕಡಿಮೆ ವ್ಯಾಸದ ಸೂಕ್ಷ್ಮ ಘನ ಕಣಗಳನ್ನು ಉಲ್ಲೇಖಿಸುತ್ತದೆ. ಪಿ.ಎಂ 2.5 ಅನ್ನು ಜಾಗತಿಕವಾಗಿ ಸಾವಿಗೆ ಕಾರಣವಾಗುವ ಪ್ರಮುಖ ಪರಿಸರದ ಅಂಶ ಎಂದು ಪರಿಗಣಿಸಲಾಗಿದೆ ಮತ್ತು 2015 ರಲ್ಲಿ ವಾರ್ಷಿಕ 4.2 ಮಿಲಿಯನ್ ಅವಧಿಪೂರ್ವ ಸಾವಿಗೆ ಕಾರಣವಾಗಿದೆ.

ಪಿ.ಎಂ 2.5 ವಾಯು ಮಾಲಿನ್ಯ: ದಿಲ್ಲಿಯಲ್ಲಿ 54 ಸಾವಿರ, ಬೆಂಗಳೂರಲ್ಲಿ 12,000 ಜನ ಸಾವು!

ಇಂಧನ ಮತ್ತು ಶುದ್ಧ ವಾಯು ಸಂಶೋಧನೆ ಕೇಂದ್ರವು ಅಭಿವೃದ್ಧಿಪಡಿಸಿದ ವಿಧಾನವನ್ನು ಆಧರಿಸಿ ಕಾಸ್ಟ್ ಎಸ್ಟಿಮೇಟರ್ ಕಾರ್ಯನಿರ್ವಹಿಸುತ್ತದೆ. ಐಕ್ಯೂ ಏರ್ ನೈಜ ಸಮಯದ ವಾಯು ಗುಣಮಟ್ಟ ಡೇಟಾವನ್ನು ಬಳಸುತ್ತದೆ ಮತ್ತು ವೈಜ್ಞಾನಿಕ ರಿಸ್ಕ್ ಮಾಡೆಲ್ಗಳನ್ನು ಸಂಯೋಜಿಸುತ್ತದೆ. ಅಲ್ಲದೆ, ಜನಸಂಖ್ಯೆ ಮತ್ತು ಆರೋಗ್ಯ ಡೇಟಾವನ್ನೂ ಒಳಗೊಂಡಿದೆ. ಈ ಮೂಲಕ ನೈಜ ಸಮಯದಲ್ಲಿ ವಾಯು ಮಾಲಿನ್ಯದಿಂದಾಗಿ ಆರೋಗ್ಯ ಮತ್ತು ಆರ್ಥಿಕತೆಯ ಮೇಲಿನ ಪರಿಣಾಮವನ್ನು ಟ್ರ್ಯಾಕ್ ಮಾಡುತ್ತದೆ. ವಿಶ್ವದ ವಿವಿಧ ನಗರಗಳಲ್ಲಿ ಸೂಕ್ಷ್ಮ ಘನ ಕಣ (ಪಿ.ಎಂ2.5) ದಿಂದ ವಾಯು ಮಾಲಿನ್ಯದ ಅಂದಾಜು ವೆಚ್ಚವನ್ನು ಲೆಕ್ಕ ಮಾಡಲು ಭೂ ಮಟ್ಟದ ವಾಯು ಗುಣಮಟ್ಟ ಡೇಟಾಗೆ ಅಲ್ಗೊರಿಥಂ ಕಾಸ್ಟ್ ಎಸ್ಟಿಮೇಟರ್ ಅನ್ವಯಿಸಲಾಗಿದೆ.

ಮರಣ ಪ್ರಮಾಣ ಮತ್ತು ಕಾಸ್ಟ್ ಎಸ್ಟಿಮೇಟರ್​​ನಲ್ಲಿ ಲಭ್ಯವಿರುವ ಡೇಟಾ ಪ್ರಕಾರ ಒಂದು ವರ್ಷದಲ್ಲಿ ಪಿ.ಎಂ 2.5 ಬಗ್ಗೆ ಹಿಂದಿನ ವರ್ಷದಲ್ಲಿನ ಅಂಕಿ ಅಂಶವನ್ನು ಆನ್ಲೈನ್ ಟೂಲ್​ನಲ್ಲಿ ಒದಗಿಸಲಾಗುತ್ತಿದ್ದು, ವರ್ಷದಲ್ಲಿ ದಾಖಲಾದ ಮಾಲಿನ್ಯಕಾರಕ ಮಟ್ಟಗಳಿಗೆ ಅನುಗುಣವಾಗಿ ಹಿಂದಿನ 365 ದಿನಗಳಿಗೆ ಹೋಲಿಕೆ ಮಾಡಿ ವಾರ್ಷಿಕ ವೆಚ್ಚವನ್ನು ಲೆಕ್ಕ ಮಾಡಲಾಗುತ್ತದೆ. ಹಲವು ವಾಯು ಮಾಲಿನ್ಯಕಾರಕವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆದರೆ, ಕೇವಲ ಪಿ.ಎಂ 2.5 ಮಾಲಿನ್ಯವನ್ನು ಮಾತ್ರ ಈ ವರದಿಯಲ್ಲಿ ಸೇರಿಸಲಾಗಿದೆ.

Last Updated : Feb 19, 2021, 2:58 AM IST

ABOUT THE AUTHOR

...view details