ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿಂದು 54 ಸೋಂಕು ಪ್ರಕರಣ ಪತ್ತೆ.. ಸಾವು ಶೂನ್ಯ - ಕರ್ನಾಟಕ ಕೋವಿಡ್ ಕೇಸ್

ರಾಜ್ಯದಲ್ಲಿಂದು 54 ಮಂದಿಗೆ ಕೊರೊನಾ ಅಂಟಿರುವುದು ದೃಢಪಟ್ಟಿದೆ..

karnataka corona cases
ರಾಜ್ಯ ಕೊರೊನಾ ಪ್ರಕರಣ

By

Published : Apr 17, 2022, 7:37 PM IST

ಬೆಂಗಳೂರು: ರಾಜ್ಯದಲ್ಲಿ 7,188 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, 54 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಪ್ರಕರಣಗಳ ಸಂಖ್ಯೆ 39,46,369ಕ್ಕೆ ಏರಿಕೆ ಆಗಿದೆ.‌ ಕೋವಿಡ್ ಪಾಸಿಟಿವ್ ದರ ಶೇ.0.75ರಷ್ಟಿದೆ.

31 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 39,04,806 ಮಂದಿ ಚೇತರಿಸಿಕೊಂಡಿದ್ದಾರೆ. ಇಂದು ಸೋಂಕಿನಿಂದ ಮೃತಪಟ್ಟವರ ವರದಿಯಾಗಿಲ್ಲ. ಈವರೆಗಿನ ಮೃತರ ಸಂಖ್ಯೆ 40,057 ರಷ್ಟಿದೆ. ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,464.

ಇದನ್ನೂ ಓದಿ:ರಾಜ್ಯದಲ್ಲಿ ಮಿಷನ್ 150 ತಲುಪುವ ವಿಶ್ವಾಸವಿದೆ: ಜೆ.ಪಿ.ನಡ್ಡಾ

ಬೆಂಗಳೂರಿನಲ್ಲಿ 49 ಮಂದಿಗೆ ಸೋಂಕು ತಗುಲಿದ್ದು, ಪ್ರಕರಣಗಳ ಸಂಖ್ಯೆ 17,82,408ಕ್ಕೆ ಏರಿಕೆ ಆಗಿದೆ. 29 ಮಂದಿ ಡಿಸ್ಜಾರ್ಜ್ ಆಗಿದ್ದು, ಈ ತನಕ 17,64,054 ಮಂದಿ ಚೇತರಿಸಿಕೊಂಡಿದ್ದಾರೆ. ಇಂದು ಯಾವುದೇ ಸಾವಿನ ವರದಿಯಾಗಿಲ್ಲ. ಒಟ್ಟು ಸಾವಿನ ಸಂಖ್ಯೆ 16,962 ರಷ್ಟಿದ್ದು, ಸಕ್ರಿಯ ಪ್ರಕರಣಗಳು 1,391 ರಷ್ಟಿವೆ.

ರೂಪಾಂತರಿ ವೈರಸ್ ಅಪಡೇಟ್ಸ್:

ಅಲ್ಪಾ- 156.
ಬೇಟಾ-08.
ಡೆಲ್ಟಾ ಸಬ್ ಲೈನ್ ಏಜ್- 4620.
ಇತರೆ- 311.
ಒಮಿಕ್ರಾನ್- 3775.
BAI.1.529- 947.
BA1- 99.
BA2- 2729.
ಒಟ್ಟು- 8890..

ABOUT THE AUTHOR

...view details