ನೆಲಮಂಗಲ: ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಿ 500 ಕೋಟಿ ರೂಪಾಯಿಯನ್ನು ಬಜೆಟ್ ನಲ್ಲಿ ಘೋಷಿಸುವುದಾಗಿ ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 500 ಕೋಟಿ ರೂಪಾಯಿ: ಸಿಎಂ - ಉತ್ತರ ಕರ್ನಾಟಕ
ಅಸಂಖ್ಯ ಪ್ರಮಥರ ಗಣ ಮೇಳದ ಸಮಾರೋಪ ಸಮಾರಂಭದಲ್ಲಿ ಭಾಗಿಯಾದ ಮುಖ್ಯಮಂತ್ರಿ ಯಡಿಯೂರಪ್ಪನವರು 12 ನೇ ಶತಮಾನದಲ್ಲಿ ಬಸವಾದಿ ಪ್ರಮಥರ ಕೊಡುಗೆ ಅಸಾಮಾನ್ಯವಾದದ್ದು, ಇಂದಿನ ಸಂಸದೀಯ ವ್ಯವಸ್ಥೆಗೆ ಅಂದಿನ ಬಸವೇಶ್ವರರ ಕಾರ್ಯ ಶ್ಲಾಘನಾರ್ಹ ಎಂದು ತಮ್ಮ ಅಭಿಪ್ರಾಯ ಮಂಡಿಸಿದರು. ಇದೇ ವೇಳೆ ಕಲ್ಯಾಣ ಕರ್ನಾಟಕ ಅಭಿವೃಧ್ಧಿಗೆ 500 ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ
ಅಸಂಖ್ಯ ಪ್ರಮಥರ ಗಣಮೇಳ, ಕಲ್ಯಾಣ ಕರ್ನಾಟಕಕ್ಕೆ ಸಿಎಂ ನೀಡಿದ್ರು ಸಿಹಿ ಸುದ್ದಿ
ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಮೈದಾನದಲ್ಲಿ ನಡೆದ ಅಸಂಖ್ಯ ಪ್ರಮಥರ ಗಣಮೇಳದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗವಹಿಸಿದ್ದರು. ಸಮ್ಮೇಳನ ಉದ್ದೇಶಿಸಿ ಮಾತನಾಡಿ, 12 ನೇ ಶತಮಾನದಲ್ಲಿ ಬಸವಾದಿ ಪ್ರಮಥರ ಕೊಡುಗೆ ಅಸಾಮಾನ್ಯವಾದದ್ದು, ಇಂದಿನ ಸಂಸದೀಯ ವ್ಯವಸ್ಥೆಗೆ ಅಂದಿನ ಬಸವೇಶ್ವರರ ಕಾರ್ಯ ಶ್ಲಾಘನಾರ್ಹ. ಗಣಮೇಳದಿಂದ ಜಾಗತಿಕ ಶಾಂತಿ, ಸಮನ್ವಯತೆ ಮೂಡಲಿ, ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಿ 500 ಕೋಟಿ ಬಜೆಟ್ ನಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಎಂದರು.