ಬೆಂಗಳೂರು: ಸಸ್ಯ ಸಂಪತ್ತನ್ನು ವೃದ್ಧಿಸುವ ಉದ್ದೇಶ ಇಟ್ಟುಕೊಂಡು ಐಕ್ಯ ಫೌಂಡೇಶನ್ ವತಿಯಿಂದ 50 ಸಾವಿರ ಬೀಜದ ಉಂಡೆಗಳನ್ನು ತಯಾರಿಸಲಾಗುತ್ತಿದೆ.
ಕೆ.ಆರ್ ಪುರದಲ್ಲಿ ಸಚಿವ ಬೈರತಿ ಬಸವರಾಜ್ ಅವರ ಮಾರ್ಗದರ್ಶನದಲ್ಲಿ ಐಕ್ಯ ಫೌಂಡೇಶನ್ ಮತ್ತು ಸ್ನೇಹ ಸಿರಿ ಪರಿಸರ ಪ್ರೇಮಿಗಳು ಸೇರಿಕೊಂಡು ಕೆ.ವಿ ಲೇಔಟ್ನಲ್ಲಿ ಬೀಜದ ಉಂಡೆಗಳನ್ನು ತಯಾರು ಮಾಡುತ್ತಿದ್ದಾರೆ. ಚಿಂತಾಮಣಿ ಸಮೀಪದ ಅಂಬಾಜಿದುರ್ಗ ಗುಡ್ಡ ಪ್ರದೇಶದಲ್ಲಿ ತಯಾರಾದ ಬೀಜದ ಉಂಡೆಗಳನ್ನು ಎಸೆದು ಸಮೃದ್ಧಿಯಾದ ಸಸ್ಯಸಂಪತ್ತನ್ನು ನಿರ್ಮಿಸಲು ಮುಂದಾಗಿದ್ದಾರೆ.
ಬೀಜದುಂಡೆ ತಯಾರಿ ಕುರಿತು ಮಾಹಿತಿ ನೀಡಿದ ಐಕ್ಯ ಫೌಂಡೇಶನ್ ಸದಸ್ಯ ಶ್ರೀರಾಮ್ ಈ ಕುರಿತು ಮಾಹಿತಿ ನೀಡಿರುವ ಐಕ್ಯ ಫೌಂಡೇಶನ್ ಸದಸ್ಯ ಶ್ರೀರಾಮ್, ಈ ಬೀಜದ ಉಂಡೆಗಳನ್ನು ಮಳೆಗಾಲದಲ್ಲಿ ಬೆಟ್ಟ, ಗುಡ್ಡ ಪ್ರದೇಶದಲ್ಲಿ ಎಸೆಯುವುದರಿಂದ ಮೊಳಕೆ ಒಡೆದು ಗಿಡವಾಗಿ ಬೆಳೆಯಲು ಸಹಕಾರಿಯಾಗುತದೆ. ನಾವು ಬೆಟ್ಟಗಳಲ್ಲಿ ಗಿಡಗಳನ್ನು ನೆಡಲು ಆಗುವುದಿಲ್ಲ, ಆದರಿಂದ 50 ಸಾವಿರ ಉಂಡೆಗಳನ್ನು ಎಸೆದರೆ ಅದಲ್ಲಿ ಕನಿಷ್ಠ 40 ಸಾವಿರ ಗಿಡಗಳಾದರೂ ಬದುಕುತ್ತವೆ ಎಂದರು.
ಜಾಗತಿಕ ತಾಪಮಾನ, ವಾಯು ಮಾಲಿನ್ಯ ತಡೆಯಲು ಅತಿ ಹೆಚ್ಚು ಮರ-ಗಿಡಗಳನ್ನು ಬೆಳೆಸುವುದು ಅವಶ್ಯಕ. ಮರಗಳನ್ನು ಹೆಚ್ಚು ಬೆಳೆಸಿ ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡುಗೆಯಾಗಿ ನೀಡಬೇಕು. ಆದ್ದರಿಂದ ಪ್ರತಿಯೊಬ್ಬರು ಗಿಡಗಳನ್ನು ಬೆಳೆಸಬೇಕು ಎಂದರು.