ಕರ್ನಾಟಕ

karnataka

ETV Bharat / city

ಸಿಎಂ ರಿಲೀಫ್ ಫಂಡ್​​ಗೆ ಐದು ಕೋಟಿ ರೂಪಾಯಿಗಳ ದೇಣಿಗೆ: ಬೊಮ್ಮಾಯಿ ಹರ್ಷ - cm basavaraja bommai

ಇಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕರ್ನಾಟಕ ರಾಜ್ಯ ಖನಿಜ ನಿಗಮದ ವತಿಯಿಂದ ಐದು ಕೋಟಿ ರೂಪಾಯಿಗಳ ಚೆಕ್ ವಿತರಿಸಲಾಯಿತು.

money to cm donation fund
ಸಿಎಂ ರಿಲೀಫ್ ಫಂಡ್​​ಗೆ ಐದು ಕೋಟಿ ರೂಪಾಯಿಗಳ ದೇಣಿಗೆ

By

Published : Aug 11, 2021, 2:08 PM IST

ಬೆಂಗಳೂರು: ಕರ್ನಾಟಕ ರಾಜ್ಯ ಖನಿಜ ನಿಗಮದ ವತಿಯಿಂದ ಇಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಐದು ಕೋಟಿ ರೂಪಾಯಿಗಳ ಚೆಕ್ ವಿತರಿಸಲಾಯಿತು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಹಾಲಪ್ಪ ಆಚಾರ್ ಮತ್ತು ನಿಗಮದ ಅಧ್ಯಕ್ಷರಾದ ಲಿಂಗಮೂರ್ತಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಚೆಕ್ ನೀಡಿದರು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪಡೆದ ಮೊದಲ ಚೆಕ್ ಇದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದರು.

ABOUT THE AUTHOR

...view details