ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿಂದು 453 ಕೊರೊನಾ ಕೇಸ್​ ಪತ್ತೆ: 7 ಮಂದಿ ಸಾವು - 453 new Kovid case

ಮಹಾಮಾರಿಗೆ ಇಂದು 7 ಮಂದಿ ಬಲಿಯಾಗಿದ್ದಾರೆ. ಈವರೆಗೆ ಮೃತಪಟ್ಟವರ ಸಂಖ್ಯೆ 12,316ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 121 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ ಕೋವಿಡ್ ಪಾಸಿಟಿವ್​ ಪ್ರಮಾಣ ಶೇ. 0.66ರಷ್ಟು ಇದ್ದು, ಮರಣ ಪ್ರಮಾಣ ಶೇ. 1.54ರಷ್ಟಿದೆ.

ಕೋವಿಡ್
ಕೋವಿಡ್

By

Published : Feb 25, 2021, 8:34 PM IST

ಬೆಂಗಳೂರು: ರಾಜ್ಯದಲ್ಲಿಂದು 453 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,49,636ಕ್ಕೆ ಏರಿಕೆಯಾಗಿದೆ.

ಇಂದು 947 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 9,31,725 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ 5,576 ಸಕ್ರಿಯ ಪ್ರಕರಣಗಳಿವೆ. ಮಹಾಮಾರಿಗೆ ಇಂದು 7 ಮಂದಿ ಬಲಿಯಾಗಿದ್ದಾರೆ. ಈವರೆಗೆ ಮೃತಪಟ್ಟವರ ಸಂಖ್ಯೆ 12,316ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 121 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ ಕೋವಿಡ್ ಪಾಸಿಟಿವ್​ ಪ್ರಮಾಣ ಶೇ. 0.66ರಷ್ಟು ಇದ್ದು, ಮರಣ ಪ್ರಮಾಣ ಶೇ. 1.54ರಷ್ಟಿದೆ.

ಬೆಂಗಳೂರು ಕೊರೊನಾ ವಿವರ:ಬೆಂಗಳೂರಿನಲ್ಲಿ ಇಂದು 271 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, 4 ಮಂದಿ ಮೃತಪಟ್ಟಿದ್ದಾರೆ. ಬೆಳ್ಳಂದೂರು ಅಪಾರ್ಟ್​ಮೆಂಟ್​​ನಲ್ಲಿ ಇಂದೂ ಕೂಡ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details