ಬೆಂಗಳೂರು: ರಾಜ್ಯದಲ್ಲಿಂದು 430 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 9,41,500ಕ್ಕೆ ಏರಿಕೆ ಆಗಿದೆ. 3 ಜನ ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 12,230ಕ್ಕೆ ಏರಿದೆ.
ರಾಜ್ಯದಲ್ಲಿಂದು 430 ಮಂದಿಗೆ ಕೊರೊನಾ ದೃಢ: 3 ಸೋಂಕಿತರು ಬಲಿ - ಕರ್ನಾಟಕ ಕೋವಿಡ್ ರಿಪೋರ್ಟ್
ವಿಮಾನ ನಿಲ್ದಾಣದಲ್ಲಿ 2383 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದು, ಯುಕೆಯಿಂದ 323 ಮಂದಿ ಆಗಮಿಸಿದ್ದಾರೆ. ಈವರೆಗೆ 59 ಜನಕ್ಕೆ ಪಾಸಿಟಿವ್ ಬಂದಿದ್ದು, ಈ ಸೋಂಕಿತರ ಸಂಪರ್ಕದಲ್ಲಿದ್ದ 26 ಮಂದಿಗೂ ಪಾಸಿಟಿವ್ ದೃಢಪಟ್ಟಿದೆ. 21 ಜನರಿಗೆ ರೂಪಾಂತರ ಕೊರೊನಾ ಹರಡಿದೆ.
ಕರ್ನಾಟಕ ಕೊರೊನಾ ವರದಿ
470 ಮಂದಿ ಗುಣಮುಖರಾಗಿದ್ದು, 9,23,377 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 5874 ಇದ್ದು, 144 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತ ಪ್ರಕರಣಗಳ ಶೇಕಡವಾರು 0.58ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ. 0.69ರಷ್ಟು ಇದೆ.