ಬೆಂಗಳೂರು: ನಗರದಲ್ಲಿಂದು 4,192 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 24 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ.
ಬೆಂಗಳೂರು : 4,192 ಮಂದಿಯಲ್ಲಿ ಕೊರೊನಾ ದೃಢ, 24 ಮಂದಿ ಸಾವು - ಕೊರೊನಾ ವೈರಸ್
ಬೆಂಗಳೂರು ಮಹಾನಗರದಲ್ಲಿಂದು ಒಂದೇ ದಿನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ನಾಲ್ಕು ಸಾವಿರ ದಾಟಿದೆ. ಇಂದು 4,192 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಬೆಂಗಳೂರು ಕೋವಿಡ್ ವರದಿ
ಸಾವಿನ ಸಂಖ್ಯೆ 2,762 ಕ್ಕೆ ಏರಿದೆ. ಒಟ್ಟು ಕೋವಿಡ್ ಪಾಸಿಟಿವ್ ಸಂಖ್ಯೆ 2,08467. ಇಂದು 3,854 ಮಂದಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 1,65,419 ಮಂದಿ ಗುಣಮುಖರಾಗಿದ್ದಾರೆ. 40,285 ಸಕ್ರಿಯ ಪ್ರಕರಣಗಳಿವೆ. ಒಟ್ಟು 260 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.