ಬೆಂಗಳೂರು: ನಗರದಲ್ಲಿಂದು 3,925 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. 21 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ರಾಜಧಾನಿಯಲ್ಲಿ ಒಟ್ಟು ಸಾವಿನ ಸಂಖ್ಯೆ 3045 ಕ್ಕೆ ಏರಿದೆ.
ರಾಜಧಾನಿಯಲ್ಲಿ 3,925 ಕೊರೊನಾ ಕೇಸ್.. ಇಂದೇ ಒಂದೇ ದಿನಕ್ಕೆ 21 ಮಂದಿ ಬಲಿ - ಕೋವಿಡ್-19
ಈವರೆಗೆ ಒಟ್ಟು 1,89,362 ಮಂದಿ ಗುಣಮುಖರಾಗಿದ್ದಾರೆ. 53,292 ಸಕ್ರಿಯ ಪ್ರಕರಣಗಳಿವೆ..

ಬೆಂಗಳೂರು ಕೊರೊನಾ ವರದಿ
ನಗರದ ಒಟ್ಟು ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 2,45,700ಕ್ಕೆ ಏರಿಕೆ ಆಗಿದ್ದು, ಇಂದು 2001 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 1,89,362 ಮಂದಿ ಗುಣಮುಖರಾಗಿದ್ದಾರೆ. 53,292 ಸಕ್ರಿಯ ಪ್ರಕರಣಗಳಿವೆ. ಒಟ್ಟು 291 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.