ಕರ್ನಾಟಕ

karnataka

ETV Bharat / city

ಮೆಜೆಸ್ಟಿಕ್​​​​ನಲ್ಲಿ ಅಪರಾಧ ತಡೆಗೆ ಕೆಎಸ್​ಆರ್​ಟಿಸಿ ಮೂರನೇ ಕಣ್ಣು! - ಕೆಎಸ್​ಆರ್​​ಟಿಸಿ ಮೆಜೆಸ್ಟಿಕ್ ನಿಲ್ದಾಣ

ಸಾಂಕ್ರಾಮಿಕ ಕೋವಿಡ್ ಸಮಯವಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ಅಪರಾಧ ಕೃತ್ಯಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ, ಮತ್ತಷ್ಟು ಹೆಚ್ಚಿನ ಸುರಕ್ಷತೆ ಕೈಗೊಂಡಿದ್ದೇವೆ ಎಂದು ಕೆಎಸ್​ಆರ್​​ಟಿಸಿ ಮೆಜೆಸ್ಟಿಕ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ ಹೇಳಿದರು.

KSRTC Bus Station
ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ

By

Published : Nov 12, 2020, 6:24 PM IST

ಬೆಂಗಳೂರು:ರಾಜ್ಯ ರಾಜಧಾನಿಯ ಕೇಂದ್ರ ಬಿಂದು ಅಂದರೆ ಅದುವೇ ಮುಖ್ಯ ಬಸ್ ನಿಲ್ದಾಣ. ಹೀಗಾಗಿ ರಾಜ್ಯ ಮತ್ತು ಅನ್ಯ ರಾಜ್ಯಗಳಿಂದ ಬೇರೆ ಬೇರೆ ಭಾಗಗಳಿಂದ ಬರುವ ಜನರಿಗೆ ಗುರುತು ಕೇಂದ್ರ ಮೆಜೆಸ್ಟಿಕ್​​ ಬಸ್ ನಿಲ್ದಾಣ. ನಿತ್ಯ ಸಾವಿರಾರು ಬಸ್​ಗಳ ಸಂಚಾರ, ಲಕ್ಷಾಂತರ ಪ್ರಯಾಣಿಕರ ಓಡಾಟದಿಂದ ಯಾವಾಗಲೂ ಗಿಜಿಗುಡುತ್ತಿರುತ್ತದೆ.

ಹೆಚ್ಚು ಜನಸಂದಣಿ ಪ್ರದೇಶದಲ್ಲಿ ಕಳ್ಳತನ, ದೈಹಿಕ ಹಲ್ಲೆ ಹೀಗೆ ಹಲವು ಅಪರಾಧಗಳು ಜರುಗುವುದು ಸಾಮಾನ್ಯ. ಹೀಗಾಗಿ, ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಭದ್ರತೆ ವಹಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣವಾದ ಮೆಜೆಸ್ಟಿಕ್​ನಲ್ಲಿ ಹೊಸದಾಗಿ 39 ಸಿಸಿ ಟಿವಿಗಳನ್ನು ಅಳವಡಿಸಿ ಪ್ರಯಾಣಿಕರ ಸುರಕ್ಷತೆ, ಅನುಕೂಲತೆ ಹಾಗೂ ಭದ್ರತೆಗೆ ನಿಗಮ ಮುಂದಾಗಿದೆ.

ಕೆಎಸ್​ಆರ್​​ಟಿಸಿ ಮೆಜೆಸ್ಟಿಕ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ

ಈ ಬಗ್ಗೆ ಈಟಿವಿ ಭಾರತದೊಂದಿಗೆಕೆಎಸ್​ಆರ್​​ಟಿಸಿ ಮೆಜೆಸ್ಟಿಕ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ ಅವರು ಮಾತನಾಡಿ, ಮೆಜೆಸ್ಟಿಕ್​​ನಿಂದ ಪ್ರತಿದಿನ ಸುಮಾರು 1700-1800 ಬಸ್​​ಗಳು ನಾನಾ ಜಿಲ್ಲೆ ಹಾಗೂ ಅಂತಾರಾಜ್ಯಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದು, 25-26 ಸಾವಿರ ಪ್ರಯಾಣಿಕರು ಪ್ರಯಾಣ ಬೆಳೆಸುತ್ತಾರೆ. ಅವರ ಸುರಕ್ಷತೆ ದೃಷ್ಟಿಯಿಂದ ನಿಗಮದಿಂದ ಹೆಚ್ಚುವರಿ 39 ಸಿಸಿಟಿವಿ ಅಳವಡಿಸಲಾಗಿದೆ. ಅಷ್ಟಲ್ಲದೇ ಪ್ರತಿ ದಿನ ಪಾಳಿಯಲ್ಲಿ 35 ಸಿಬ್ಬಂದಿ ಅವುಗಳನ್ನು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.

ABOUT THE AUTHOR

...view details