ಕರ್ನಾಟಕ

karnataka

ETV Bharat / city

ಕೊರೊನಾ ನಡುವೆ ಬೆಂಗಳೂರಲ್ಲಿ 376 ಡೆಂಗ್ಯೂ ಕೇಸ್​​​ ಪತ್ತೆ: ಜೂನ್​​ನಿಂದ ಮತ್ತಷ್ಟು ಹೆಚ್ಚಾಗುವ ಭೀತಿ! - dengue cases news

ಡೆಂಗ್ಯೂ ಜ್ವರದ ಭೀತಿಯೂ ಸಹ ಹೆಚ್ಚುತ್ತಿದೆ. ರಾಜ್ಯದಲ್ಲಿ 1,823 ಪ್ರಕರಣಗಳು ಕಂಡು ಬಂದಿದ್ರೆ, ಬೆಂಗಳೂರಲ್ಲಿ ಈವರೆಗೆ 376 ಪ್ರಕರಣಗಳು ದಾಖಲಾಗಿವೆ.

ಡೆಂಗ್ಯೂ
ಡೆಂಗ್ಯೂ

By

Published : May 19, 2020, 11:10 AM IST

ಬೆಂಗಳೂರು: ಕೊರೊನಾ ನಡುವೆ ಡೆಂಗ್ಯೂ ಜ್ವರದ ಭೀತಿಯೂ ಹೆಚ್ಚಾಗತೊಡಗಿದೆ. ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಕಡಿಮೆ ಇದ್ರೂ ಸಹ ರಾಜ್ಯವ್ಯಾಪಿಯಾಗಿ ನೋಡಿದ್ರೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.

ಡೆಂಗ್ಯೂ ಕುರಿತು ಬಿಬಿಎಂಪಿ ಉಪ ಆರೋಗ್ಯಾಧಿಕಾರಿ ವೆಂಕಟೇಶ್ ಪ್ರತಿಕ್ರಿಯೆ

ಮಳೆ ಆರಂಭವಾಗಿ ಹತ್ತು ಹದಿನೈದು ದಿನ ಮತ್ತೆ ಬಿಸಿಲು ಬಂದರೆ ನಿಂತ ನೀರಲ್ಲಿಯೇ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹೀಗಾಗಿ ಜೂನ್ ತಿಂಗಳಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ದಾಖಲಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ 1,823 ಪ್ರಕರಣಗಳು ಕಂಡು ಬಂದಿದ್ರೆ, ಬೆಂಗಳೂರಲ್ಲಿ ಈವರೆಗೆ 376 ಪ್ರಕರಣಗಳು ದಾಖಲಾಗಿವೆ. ಜನವರಿಯಲ್ಲಿ-143, ಫೆಬ್ರವರಿಯಲ್ಲಿ-81, ಮಾರ್ಚ್-69, ಏಪ್ರಿಲ್-62, ಮೇ-21 (18-06-2020) ಒಟ್ಟು 376 ಪ್ರಕರಣ ಕಂಡು ಬಂದಿದೆ. ಕಳೆದ ಒಂದು ವರ್ಷ ಒಟ್ಟು 9,009 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದವು.

ರೋಗದ ಲಕ್ಷಣಗಳು?

  • ಕೊರೊನಾ ಹಾಗೂ ಡೆಂಗ್ಯೂ ಪ್ರಕರಣ ಎರಡರಲ್ಲೂ ತೀವ್ರ ಜ್ವರ ಇರುತ್ತದೆ. ಹೀಗಾಗಿ ಆರೋಗ್ಯ ಪರೀಕ್ಷೆಗೆ ಬರುತ್ತಿರುವವರನ್ನು ಪರೀಕ್ಷಿಸುವಾಗ ಕೊರೊನಾ ಅಥವಾ ಡೆಂಗ್ಯೂ ಇರಬಹುದಾ ಎಂಬ ಸಣ್ಣ ಗೊಂದಲ ಉಂಟಾಗುತ್ತಿದ್ದು, ರಿಪೋರ್ಟ್ ಬಂದಾಗಷ್ಟೇ ಸ್ಪಷ್ಟವಾಗುತ್ತಿದೆ.
  • ಕೋವಿಡ್-19 ವೈರಸ್ ಕೆಮ್ಮಿದಾಗ, ಸೀನಿದಾಗ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಆದರೆ ಡೆಂಗ್ಯೂ ಸೊಳ್ಳೆಯಿಂದ ಬರುವ ಕಾಯಿಲೆಯಾಗಿದ್ದು, ನಿಂತ ನೀರಲ್ಲಿ ಸೊಳ್ಳೆ ಉತ್ಪತ್ತಿಯಾಗಿ ವ್ಯಕ್ತಿಗೆ ಕಚ್ಚುವುದರಿಂದ ಜ್ವರ ಬರುತ್ತದೆ.
  • ಕೋವಿಡ್-19ನಲ್ಲಿ ತೀವ್ರ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಲಕ್ಷಣವಾಗಿದ್ದರೆ, ಒಮ್ಮೊಮ್ಮೆ ಯಾವ ಲಕ್ಷಣವೂ ಇಲ್ಲದೆ ಕೊರೊನಾ ವೈರಸ್ ಹರಡುವ ಸಾಧ್ಯತೆಯೂ ಇರುತ್ತದೆ. ಆದ್ರೆ ಡೆಂಗ್ಯೂವಿನಲ್ಲಿ ಮೈ, ಕೈ ನೋವು, ಜ್ವರ, ಕಣ್ಣು ಗುಡ್ಡೆ ಹಿಂಭಾಗದಲ್ಲಿ ನೋವು ಕಂಡುಬರುತ್ತದೆ.

ಈ ಬಗ್ಗೆ ಬಿಬಿಎಂಪಿ ಉಪ ಆರೋಗ್ಯಾಧಿಕಾರಿ ವೆಂಕಟೇಶ್ ಮಾತನಾಡಿ, ಕೊರೊನಾ ಹಾಗೂ ಡೆಂಗ್ಯೂ ಹರಡುವ ವಿಧಾನ ಬೇರೆ ಬೇರೆ. ಹಾಗೆಯೇ ರೋಗದ ಲಕ್ಷಣದಲ್ಲೂ ವ್ಯತ್ಯಾಸ ಇರುತ್ತದೆ. ಆದರೆ ಡೆಂಗ್ಯೂನಲ್ಲಿ ಸಾವನ್ನಪ್ಪುವವರ ಪ್ರಮಾಣ ಕಡಿಮೆ ಇದೆ. ಈ ಲಾಕ್​ಡೌನ್ ಅವಧಿಯಲ್ಲಿ ಜನ ಸ್ವಲ್ಪ ಜ್ವರ ಬಂದರೂ ಪರೀಕ್ಷಿಸಿಕೊಳ್ಳುತ್ತಿರುವುದರಿಂದ ಕಾಯಿಲೆ ತೀವ್ರ ಸ್ವರೂಪ ಪಡೆದುಕೊಳ್ಳದೆ ಬೇಗ ಗುಣಮುಖವಾಗುತ್ತಿದೆ ಎಂದರು.

ABOUT THE AUTHOR

...view details