ಬೆಂಗಳೂರು: ನಗರದಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಲೇ ಇದೆ. ಬೊಮ್ಮನಹಳ್ಳಿಯ ಬಿಳೇಕಳ್ಳಿ ಖಾಸಗಿ ಅಪಾರ್ಟಮೆಂಟ್ ಒಂದರಲ್ಲಿ 36 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಬೊಮ್ಮನಹಳ್ಳಿಯಲ್ಲಿ 36 ಕೊರೊನಾ ಪಾಸಿಟಿವ್ ಪ್ರಕರಣ ದೃಢ - Bommanahalli Corona Positive Cases
2 ಸಾವಿರ ಜನರು ವಾಸವಿರುವ ಬೆಂಗಳೂರಿನ ಬೊಮ್ಮನಹಳ್ಳಿಯ ಬಿಳೇಕಳ್ಳಿ ವಾರ್ಡ್ ನಂ 188 ಅಪಾರ್ಟ್ಮೆಂಟ್ನಲ್ಲಿ 36 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಕೊರೊನಾ ಪಾಸಿಟಿವ್ ಪ್ರಕರಣಗಳು
2 ಸಾವಿರ ಜನ ವಾಸವಿರುವ ಬೆಂಗಳೂರಿನ ಬೊಮ್ಮನಹಳ್ಳಿಯ ಬಿಳೇಕಳ್ಳಿ ವಾರ್ಡ್ ನಂ. 188 ರಲ್ಲಿರುವ ಅಪಾರ್ಟಮೆಂಟ್ ಇದಾಗಿದ್ದು, 40 ಜನರ ಪೈಕಿ 36 ಜನರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇವರು 25 ರಿಂದ 35 ವರ್ಷದೊಳಗಿನವರು ಎಂದು ತಿಳಿದು ಬಂದಿದೆ.
ಅಪಾರ್ಟಮೆಂಟ್ನ ಎಲ್ಲ ನಿವಾಸಿಗಳಿಗೆ ಕೊರೊನಾ ಟೆಸ್ಟ್ ಮಾಡಿಸುವಂತೆ ಮನವಿ ಮಾಡಲಾಗಿದ್ದು, ಈ ಹಿನ್ನೆಲೆ ಎಲ್ಲ ನಿವಾಸಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.