ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿಂದು 317 ಮಂದಿಗೆ ಸೋಂಕು ದೃಢ: 5 ಸೋಂಕಿತರು ಕೋವಿಡ್​ಗೆ ಬಲಿ

ಇಂದು ರಾಜ್ಯದಲ್ಲಿ 287 ಮಂದಿ ಗುಣಮುಖರಾಗಿದ್ದು, ಈವರೆಗೆ 9,30,087 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 6,061 ಇದ್ದು, 128 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಸೋಂಕಿತ ಪ್ರಕರಣಗಳ ಶೇಕಡವಾರು 0.69% ರಷ್ಟು ಇದ್ದರೆ ಮೃತ ಪಟ್ಟವರ ಪ್ರಮಾಣ ಶೇ.1.57% ರಷ್ಟು ಇದೆ.

ಕೋವಿಡ್
ಕೋವಿಡ್

By

Published : Feb 22, 2021, 8:30 PM IST

ಬೆಂಗಳೂರು: ರಾಜ್ಯದಲ್ಲಿಂದು 317 ಮಂದಿಗೆ ಸೋಂಕು ತಗುಲಿದ್ದು ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9,48,466ಕ್ಕೆ ಏರಿಕೆಯಾಗಿದೆ. ಇಂದು ಐವರು ಸೋಂಕಿತರು ಮೃತರಾಗಿದ್ದು, ಒಟ್ಟು ಸಾವಿನ ಸಂಖ್ಯೆ 12,299ಕ್ಕೆ ಏರಿದೆ.‌

ಇಂದು ರಾಜ್ಯದಲ್ಲಿ 287 ಮಂದಿ ಗುಣಮುಖರಾಗಿದ್ದು, ಈವರೆಗೆ 9,30,087 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 6,061 ಇದ್ದು 128 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಸೋಂಕಿತ ಪ್ರಕರಣಗಳ ಶೇಕಡವಾರು 0.69% ರಷ್ಟು ಇದ್ದರೆ, ಮೃತ ಪಟ್ಟವರ ಪ್ರಮಾಣ ಶೇ.1.57% ರಷ್ಟು ಇದೆ.

ವಿಮಾನ ನಿಲ್ದಾಣದಿಂದ 1,878 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ.‌ ಯುಕೆಯಿಂದ 269 ಪ್ರಯಾಣಿಕರು ಆಗಮಿಸಿದ್ದು, ಈವರೆಗೆ 63 ಜನಕ್ಕೆ ಪಾಸಿಟಿವ್ ಬಂದಿದೆ. ಈ ಸೋಂಕಿತರ ಸಂಪರ್ಕದಲ್ಲಿ 26ಮಂದಿಗೂ ಪಾಸಿಟಿವ್ ದೃಢಪಟ್ಟಿದೆ.‌ 25 ಜನರಿಗೆ ರೂಪಾಂತರ ಕೊರೊನಾ ಹರಡಿದೆ.

ಬೆಂಗಳೂರು ಕೊರೊನಾ ವಿವರ:

ಬೆಂಗಳೂರಿನಲ್ಲಿಂದು 181 ಮಂದಿಗೆ ಸೋಂಕು ದೃಢಪಟ್ಟಿದ್ದು, ಈವರೆಗೆ 4,03,943ಕ್ಕೆ ಏರಿಕೆ ಆಗಿದೆ. 109 ಸೋಂಕಿತರು ಗುಣಮುಖರಾಗಿದ್ದು 3,95,104 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. 4,384 ಸಕ್ರಿಯ ಪ್ರಕರಣಗಳು ಇದ್ದು 3 ಸೋಂಕಿತರು ಕೊರೊನಾದಿಂದ ಮೃತರಾಗಿದ್ದಾರೆ.‌ ಈವರೆಗೆ 4,454ಜನರು ಸೋಂಕಿಗೆ ತುತ್ತಾಗಿದ್ದಾರೆ.

ABOUT THE AUTHOR

...view details