ಬೆಂಗಳೂರು :ದಿನೇದಿನೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿಜೆ. ಇಂದು ಒಂದೇ ದಿನ 3082 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 9,87,012ಕ್ಕೆ ಏರಿಕೆಯಾಗಿದೆ.
ಒಂದೇ ದಿನಕ್ಕೆ 3082 ಮಂದಿಗೆ ಸೋಂಕು.. 12 ಮಂದಿ ಬಲಿ - ಕೊರೊನಾ ವರದಿ
ಸೋಂಕಿತರ ಪ್ರಕರಣಗಳ ಶೇಕಡವಾರು 2.89%ರಷ್ಟಿದ್ದರೆ, ಮೃತರ ಪ್ರಮಾಣ ಶೇ. 0.38% ರಷ್ಟು ಇದೆ..
![ಒಂದೇ ದಿನಕ್ಕೆ 3082 ಮಂದಿಗೆ ಸೋಂಕು.. 12 ಮಂದಿ ಬಲಿ 3082-covid-cases-found-in-the-state](https://etvbharatimages.akamaized.net/etvbharat/prod-images/768-512-11193845-thumbnail-3x2-covid.jpg)
ಕರ್ನಾಟಕ ಕೊರೊನಾ ವರದಿ
12 ಸೋಂಕಿತರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆಯು 12,504ಕ್ಕೇರಿದೆ. ಇಂದು 1285 ಸೇರಿ ಈವರೆಗೂ 9,51,452 ಮಂದಿ ಡಿಸ್ಜಾರ್ಜ್ ಆಗಿದ್ದಾರೆ.
ಇತ್ತ ಮತ್ತೆ ಸಕ್ರಿಯ ಪ್ರಕರಣಗಳು 23,037ಕ್ಕೆ ಏರಿಕೆಯಾಗಿವೆ. 204 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಪ್ರಕರಣಗಳ ಶೇಕಡವಾರು 2.89%ರಷ್ಟಿದ್ದರೆ, ಮೃತರ ಪ್ರಮಾಣ ಶೇ. 0.38% ರಷ್ಟು ಇದೆ.