ಬೆಂಗಳೂರು: ಗ್ರಾಹಕರಿಗೆ ಪುಡ್ ಡೆಲಿವರಿ ಮಾಡುವ ಒತ್ತಡದಲ್ಲಿ ಡೆಲಿವರಿ ಬಾಯ್ಸ್ ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಲು ಆಯಾ ಕಂಪೆನಿಗಳೇ ಕಾರಣ ಎಂದು ಈ ಹಿಂದೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಿಡಿಕಾರಿದ್ದ ಹಿನ್ನೆಲೆ, ನಗರ ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಪುಡ್ ಡೆಲಿವರಿ ಕಂಪೆನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.
19 ಸಾವಿರ ಪುಡ್ ಡೆಲಿವರಿ ಬಾಯ್ ಗಳಿಂದ 30 ಸಾವಿರ ಟ್ರಾಫಿಕ್ ರೂಲ್ಸ್ ಬ್ರೇಕ್.. ಕಂಪೆನಿಗಳಿಗೆ ಕ್ಲಾಸ್ ಸ್ವಿಗ್ಗಿ, ಜೊಮ್ಯೊಟೊ, ಫುಡ್ ಪಾಂಡಾ ಸೇರಿ ಪುಡ್ ಡೆಲಿವರಿ ಮಾಡುವ ಕಂಪೆನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಗರ ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸಂಚಾರ ನಿಯಮ ಉಲ್ಲಂಘಿಸದಂತೆ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.
ಕಂಪೆನಿಗಳು ಗ್ರಾಹಕರಿಗೆ ವೇಗವಾಗಿ ಆಹಾರ ಸರಬರಾಜು ಮಾಡುವ ಭರದಲ್ಲಿ ಕಂಪನಿಗಳು ಪುಡ್ ಡೆಲಿವರಿ ಬಾಯ್ಸ್ಗಳಿಗೆ ಒತ್ತಡ ಹಾಕುತ್ತಿದ್ದು, ಇದರಿಂದ ವೇಗವಾಗಿ ಆಹಾರ ಒದಗಿಸಲು ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ಸಿಗ್ನಲ್ ಜಂಪ್, ಒನ್ ವೇ ಸಂಚಾರ, ಹೆಲ್ಮೆಟ್ ಇಲ್ಲದೆ ಚಾಲನೆ ಸೇರಿದಂತೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುತ್ತಿದ್ದಾರೆ. ಒಂದು ಮಾಹಿತಿ ಪ್ರಕಾರ ನಗರದಲ್ಲಿ, 19 ಸಾವಿರ ಪುಡ್ ಡೆಲಿವರಿ ಬಾಯ್ಸ್ಗಳು ಸುಮಾರು 30 ಸಾವಿರ ಸಂಚಾರ ನಿಯಮಗಳು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡದಿರಲು ಷರತ್ತು ವಿಧಿಸಿದ್ದು, ಕಂಪೆನಿಗಳು ನಮ್ಮ ಷರತ್ತುಗಳನ್ನ ಒಪ್ಪಿಕೊಂಡಿವೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ..
ಸಂಚಾರಿ ಪೊಲೀಸರು ವಿಧಿಸಿದ ಷರತ್ತುಗಳೇನು?
- ಬೈಕ್ಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ
- ಗ್ರಾಹಕರಿಗೆ ಪುಡ್ ಡೆಲಿವರಿಗಾಗಿ 30 ನಿಮಿಷದ ಬದಲಾಗಿ 45 ನಿಮಿಷ ಗಡುವು ವಿಸ್ತಾರ
- ಪುಡ್ ಡೆಲಿವರಿ ಮಾಡುವವರ ಸಂಪೂರ್ಣ ಮಾಹಿತಿಯಿರುವ ದತ್ತಾಂಶ ಸಂಗ್ರಹಿಸಬೇಕು
- ಪ್ರತಿ ಪುಡ್ ಡೆಲಿವರಿ ಬಾಯ್ಸ್ ಪೊಲೀಸ್ ವೆರಿಫಿಕೇಷನ್ ಮಾಡಿಸಿಕೊಳ್ಳಬೇಕು